ಮರೇವಾಡದಲ್ಲಿ ಹುಸೇನಸಾಬನಿಂದ ಅತ್ಯಾಚಾರಕ್ಕೆ ಯತ್ನ: ಆರೋಪಿ ಬಂಧನ

ಧಾರವಾಡ: ಬಿಸಿಪಿ ಶಾಲೆಯ ಸಮೀಪ ಬಹಿರ್ದೆಸೆಗೆ ಹೋಗಿದ್ದ ಬಾಲಕಿಯನ್ನ ಅತ್ಯಾಚಾರ ಮಾಡಲು ಹೋಗಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಧಾರವಾಡ ಮಹಿಳಾ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮರೇವಾಡದ ಕುಟುಂಬದಲ್ಲಿ ಮೂರು ಮಕ್ಕಳನ್ನ ಹೊಂದಿರುವ ಮಹಿಳೆಯೋರ್ವರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಧಾರವಾಡ ತಾಲೂಕಿನ ಮರೇವಾಡ ಗ್ರಾಮದಲ್ಲಿ ತಮ್ಮ ಎಂಟು ವರ್ಷದ ಮಗಳನ್ನ ಕೆಡಿಸಲು ಪ್ರಯತ್ನಿಸಿದ್ದನೆಂದು ದೂರು ನೀಡಿದ್ದಾರೆ.
ದೂರು ದಾಖಲಾದ ಹಿನ್ನೆಲೆಯಲ್ಲಿ ಮರೇವಾಡ ಗ್ರಾಮದ ಹುಸೇನಸಾಬ ಮರ್ದಾನಸಾಬ ಬಾಳಣ್ಣನವರ ಎಂಬಾತನನ್ನ ಪೊಲೀಸರು ಬಂಧಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.
ಧಾರವಾಡ ಗ್ರಾಮೀಣ ಉಪವಿಭಾಗದಲ್ಲಿಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಇಂಥವರಿಗೆ ತಕ್ಕ ಪಾಠ ಕಲಿಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಮಹಿಳಾ ಠಾಣೆ ಇನ್ಸಪೆಕ್ಟರ್ ಬಿ.ಎ.ಕಾಮನಬೈಲ್ ತನಿಖೆ ನಡೆಸುತ್ತಿದ್ದಾರೆ.