ಮಾನ್ವಿ ತಹಶೀಲ್ದಾರ ಲೈಗಿಂಕ ಕಿರುಕುಳ..? ಸಿಡಿ ಜೊತೆಗೆ ತನಿಖೆಗೆ ಜಿಲ್ಲಾಧಿಕಾರಿ ಆದೇಶ
1 min readರಾಯಚೂರು: ಮಾನ್ವಿಯ ತಹಶೀಲ್ದಾರ ಕಚೇರಿಯಲ್ಲಿರುವ ಶಿರಸ್ತೆದಾರರಿಗೆ ತಹಶೀಲ್ದಾರರೊಬ್ಬರು ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸಿಡಿಯೊಂದಿಗೆ ಸ್ವತಃ ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶಕುಮಾರ, ಮಹಿಳಾ ಅಧಿಕಾರಿಗೆ ತನಿಖೆ ನಡಡೆಸುವಂತೆ ಆದೇಶ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಹಶೀಲ್ದಾರ ಅಮರೇಶ್ ಬಿರಾದಾರ ಅವರಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ದೂರಲಾಗಿದೆ. ಮಹಿಳಾ ಶಿರಸ್ತೆದಾರಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ಮಹಿಳಾ ಶಿರಸ್ತೆದಾರ ದೂರು ನೀಡಿದ್ದಾರೆ.
ಅತಿಯಾದ ರೀತಿಯಲ್ಲಿ ನಡೆದುಕೊಂಡು ನಂತರ ಕಾಂಪ್ರಮೈಸ್ ಮಾಡಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಶಿರಸ್ತೆದಾರರು, ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿಕೊಂಡಿದ್ದರು.
ಮಹಿಳಾ ಶಿರಸ್ತೆದಾರರ ದೂರನ್ನ ಸಮಗ್ರವಾಗಿ ತನಿಖೆ ನಡೆಸುವಂತೆ ಜಿಲ್ಲಾ ಮಟ್ಟದ ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ದೂರು ನಿವಾರಣಾ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಆರ್.ಇಂದಿರಾ ಅವರಿಗೆ ಆದೇಶ ಮಾಡಿದ್ದಾರೆ.
ದೂರಿನ ಪ್ರತಿಯೊಂದಿಗೆ ಸಿಡಿಯೊಂದನ್ನ ಲಗತ್ತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪತ್ರದಲ್ಲಿ ನಮೂದು ಮಾಡಲಾಗಿದ್ದು, ಆ ಸಿಡಿಯಲ್ಲಿ ಏನಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.