ಮಂತ್ರಾಲಯದ ಶ್ರೀ ರಾಘವೇಂದ್ರ ಮಠಕ್ಕೂ ಸಂಕಷ್ಟ: ನೌಕರರ ಸಂಬಳ ಕಡಿತ ಮಾಡಿದ ಆಡಳಿತ ಮಂಡಳಿ
ಮಂತ್ರಾಲಯ: ನಂಬಿದ ನೌಕರರನ್ನೆ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಕೈ ಬಿಟ್ಟಿದ್ದಾನೆ. ಪ್ರತಿ ತಿಂಗಳು ಕೋಟಿ ಕೋಟಿ ಆದಾಯ ಇರುವ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗೆ ಕೊರೋನ ಹೊಡೆತ ಕೊಟ್ಟಿದೆ. ಈ ಕಾರಣದಿಂದ ಮಠದ ಆದಾಯಕ್ಕೆ ಸ್ವಲ್ಪ ದಕ್ಕೆಯಾಗಿದೆ. ಇದನ್ನೆ ನೆಪವಾಗಿ ಇಟ್ಟುಕೊಂಡು ಮಠದ ಆಡಳಿತ ಮಂಡಳಿ ನೌಕರರ ವೇತನದಲ್ಲಿ ಅರ್ಧದಷ್ಟು ಕಡಿತ ಮಾಡಿದೆ.
ದೇಶಾದ್ಯಂತ ನೂರಾರು ಮಠದ ಶಾಖೆಗಳಲ್ಲಿ ಕೆಲಸ ಮಾಡುವ ಸಾವಿರಾರು ನೌಕರರ ವೇತನವನ್ನು ಕಡಿತ ಮಾಡಲಾಗಿದೆ. ವೇತನ ಕಡಿತದಿಂದಾಗಿ ಮಠದ ನೌಕರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಬೇಡಿದ ವರ ಕೊಡುವ ರಾಘವೇಂದ್ರ ಸ್ವಾಮಿಗಳೆ ಕೈ ಬಿಟ್ಟ ಮೇಲೆ ನಮ್ಮನ್ನು ಇನ್ನಾರು ಕಾಪಾಡುತ್ತಾರೆ ಎನ್ನುತ್ತಿದ್ದಾರೆ ಮಠದ ನೌಕರರು. ಕಲಿಯುಗದ ಕಾಮದೇನು ಎಂದು ಕರೆಯಿಸಿಕೊಂಡ ಗುರು ರಾಯ ಎಲ್ಲಿ ಹೋದಿಯಪ್ಪ ಎನ್ನುವ ಸ್ಥಿತಿಯೀಗ ನೌಕರರದ್ದಾಗಿದೆ.
ಕೊರೋನಾ ವೈರಸ್ ಎಫೆಕ್ಟನಿಂದ ಬಾರದಿರುವ ಹಣಕ್ಕೆ ಬಡ ನೌಕರರ ಸಂಬಳ ಕಟ್ ಮಾಡಿರುವುದರ ಬಗ್ಗೆ ಅನೇಕರಲ್ಲಿ ಅಪಸ್ವರ ಮೂಡಿದೆ. ಭಗವಂತನ ಸನ್ನಿಧಿಯಲ್ಲಿಯೇ ಹೀಗಾದರೇ, ಬಡವರು ಬದುಕುವುದಾದರೂ ಹೇಗೆ ಎನ್ನುವಂತಾಗಿದೆ.