ಕಾಂಗ್ರೆಸ್ ಮುಖಂಡ ಮನೋಜಕುಮಾರ ಕರ್ಜಗಿ ಸೇರಿ ಇಬ್ಬರ ಮೇಲೆ ಅಟ್ಯಾಕ್… “ಆಕೆ, ಇವರು, ಆತ”…!!!!

ಧಾರವಾಡ: ಕಾಂಗ್ರೆಸ್ ಮುಖಂಡ ಹಾಗೂ ಆತನ ಜೊತೆಗಿರುವ ವ್ಯಕ್ತಿಯ ಮೇಲೆ ಗುಂಪೊಂದು ಹಲ್ಲೆ ಮಾಡಿರುವ ಪ್ರಕರಣ ವಿದ್ಯಾಗಿರಿಯಲ್ಲಿ ನಡೆದಿದೆ.

ವಿದ್ಯಾಗಿರಿಯಲ್ಲಿ ಕಾಂಗ್ರೆಸ್ ಮುಖಂಡ ಮನೋಜಕುಮಾರ ಕರ್ಜಗಿ ಮಾಲಿಕತ್ವದ ಲೇ ಮಾರ್ಜ್ ಶಾಫ್ ನಲ್ಲಿಯೇ ಘಟನೆ ನಡೆದಿದ್ದು, ಯುವತಿಯೋರ್ವಳ ಪ್ರಿಯಕರನ ಗುಂಪು ಹಲ್ಲೆ ಮಾಡಿದೆ ಎಂದು ಹೇಳಲಾಗಿದೆ.

ಲೇ ಮಾರ್ಜ್ ನಲ್ಲಿ ಕೆಲಸ ಮಾಡುವ ಮೆಹರವಾಡೆ ಎಂಬ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಆಕೆ ತನ್ನ ಜೊತೆಗಾರರನ್ನ ಕರೆಸಿ ಹಲ್ಲೆ ಮಾಡಿಸಿದ್ದಾರೆಂದು ಗೊತ್ತಾಗಿದೆ. ಶಾಪ್ ನಲ್ಲಿನ ಪರಿಕರಗಳಿಂದಲೇ ಹೊಡೆದಿದ್ದರಿಂದ ಮನೋಜಕುಮಾರ ಕರ್ಜಗಿ ಕಣ್ಣು, ಮುಖಕ್ಕೆ ಗಾಯವಾಗಿದೆಯಂತೆ. ಜೊತೆಗಿದ್ದ ಅಯಾನ್ ಎಂಬ ಇನ್ನೋರ್ವನಿಗೆ ತೀವ್ರ ಗಾಯವಾಗಿದೆ ಎಂದು ಹೇಳಲಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.