“ಗಣಪತಿ”ಯ ಬೆರಳಿಡಿದು ಬೆಳೆದ ‘ಮಂಜು’ಗೆ ಜಿಲ್ಲಾ ಪ್ರಶಸ್ತಿ…!
1 min readಹುಬ್ಬಳ್ಳಿ: ತನ್ನಪ್ಪ ಪ್ರತಿದಿನವೂ ಮನೆಗೆ ಕ್ಯಾಮರಾ ತಂದು ದಿನಬೆಳಗಾದರೇ ಹೊರಗೆ ಹೋಗುತ್ತಿದ್ದವನನ್ನ ಅಚ್ಚರಿಯಿಂದ ನೋಡುತ್ತಿದ್ದ ಮಗು, ಮುಂದೊಂದು ದಿನ ತಂದೆ ತನ್ನ ಮೂವತ್ತು ವರ್ಷದ ಸೇವೆಯಲ್ಲಿ ಎಂದೂ ಪಡೆಯದೇ ಇದ್ದ ಪ್ರಶಸ್ತಿಯನ್ನ ಅಪ್ಪನನ್ನ ಅಚ್ಚರಿಯಿಂದ ನೋಡುತ್ತಿದ್ದ ಆ ಮಗು ಇಂದು ಜಿಲ್ಲಾ ಪತ್ರಕರ್ತರ ಸಂಘ ನೀಡುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಂದು ಅಪ್ಪ ಗಣಪತಸಾ (ಬಹುತೇಕರಿಗೆ ಪ್ರೀತಿಯ ಅಜ್ಜಾ) ಕ್ಷತ್ರಿ ಪೋಟೊ ಸ್ಟುಡಿಯೋದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಗಾಗ ಅಪ್ಪನ ಜೊತೆ ಹೋಗುತ್ತಿದ್ದವನೇ ಮಂಜುನಾಥ ಜರತಾರಘರ.
ಮಂಜುನಾಥ ಗಣಪತಸಾ ಜರತಾರಘರಗೆ ಶ್ರೀ ಎಂ.ಡಿ.ಗೋಗೇರಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನ ಘೋಷಣೆ ಮಾಡಲಾಗಿದೆ. ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟಗೊಂಡ ಅವಳಿನಗರ ಸ್ತಬ್ಧ ಛಾಯಾಚಿತ್ರಕ್ಕೆ ಈ ಪ್ರಶಸ್ತಿಯನ್ನ ನೀಡಲಾಗಿದೆ.
ಕ್ಷತ್ರಿ ಪೋಟೊ ಸ್ಟುಡಿಯೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಣಪತಿ, ಬಹುತೇಕರಿಗೆ ಪ್ರಿಯವಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಹೊರಬಂದ ನಂತರ ಮೊದಲು ಕೈ ಹಿಡಿದಿದ್ದು ಸಂಜೆ ದರ್ಪಣ ಪತ್ರಿಕೆ. ಅಪ್ಪನ ಕನಸಿಗೆಎ ಹೆಗಲು ಕೊಡುವಷ್ಟು ದೊಡ್ಡವನಾದ ತಕ್ಷಣವೇ ಕಲಿಯುತ್ತಿದ್ದ ಐಟಿಐಯನ್ನ ಅರ್ಧಕ್ಕೆ ಬಿಟ್ಟು ಕ್ಯಾಮರಾ ಹಿಡಿದಿದ್ದು ಇದೇ ಮಂಜುನಾಥ.
ಎಲ್ಲರೊಂದಿಗೂ ಲವಲವಿಕೆಯಿಂದ ಹೊಂದಿಕೊಂಡು ಹೋಗುವ ಮನೋಭಾವನೆಯನ್ನ ಹೊಂದಿರುವ ಮಂಜುನಾಥ ತೆಗೆಯುವ ಪೋಟೊಗಳಲ್ಲಿ ಭಾವನೆಗಳು ಅಡಗಿರುತ್ತವೆ.
ತಮ್ಮ ತಂದೆಯಂತೆ ಸದಾಕಾಲ ಹಸನ್ಮುಖಿಯಾಗಿ ಹುಬ್ಬಳ್ಳಿ ಪತ್ರಿಕಾ ವಲಯದಲ್ಲಿ ತನ್ನದೇ ಆದ ಗುರುತನ್ನ ಮೂಡಿಸಿರುವ ಮಂಜುನಾಥನನ್ನ ಗುರುತಿಸಿದ್ದು ಸಾರ್ಥಕವಾಗಿದೆ. ಅಪ್ಪನ ಶ್ರಮವೂ ಇದರಲ್ಲಿಡಗಿದೆ.
ಪತ್ನಿ ವಜ್ರೇಶ್ವರಿ, ಮಕ್ಕಳಾದ ಅಂಕಿತ ಮತ್ತು ಆರವ್ ಜೊತೆ ಸುಖಿ ಕುಟುಂಬ ಹೊಂದಿರುವ ಮಂಜುನಾಥ, ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸನ್ನ ಗಳಿಸಲಿ ಎಂದು ಹಾರೈಸೋಣ.
ಕಂಗ್ರಾಟ್ಸ್ “ಮಂಜಿ”..