ಮದರಸಾ ಕಲಿಕೆ ತಪ್ಪು ಕಲ್ಪನೆ ಏಕೆ ನನಗೆ ಉರ್ದುನೇ ಬರಲ್ಲ: ಅಬೂಬಕರ್ ಸಿದ್ದಿಕಿ

ಕಲಬುರಗಿ: ಕಲಬುರಗಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ, ಎರಡನೇ ದಿನವಾದ ಇಂದು ಪ್ರಧಾನ ವೇದಿಕೆಯಲ್ಲಿ ನಾಡಿನ ವಿವಿಧ ಸಾಧಕರಿಗೆ ಸಾಹಿತ್ಯ ಪರಿಷತ್ ಸನ್ಮಾನ ಮಾಡಿ ಗೌರವ ಸೂಚಿಸಿತು. ಸನ್ಮಾನಿತರ ಪರವಾಗಿ ಮಾತನಾಡಿದ ಲೇಖಕ ಅಬೂಬಕರ್ ಸಿದ್ದಿಕಿ ವೇದಿಕೆಗೆ ಆಗಮಿಸಿ ಮಾತು ಆರಂಭಿಸುತ್ತಿದ್ದಂತೆ ಕರತಾಡನ ಮುಗಿಲು ಮುಟ್ಟಿತು. ಇದಕ್ಕೆ ಕಾರಣ ಅಬೂಬಕರ್ ತಮ್ಮ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿದ್ದು.
ಭಾಷಣ ಆರಂಭಿಸುತ್ತಲೆ, ಮುಸ್ಲಿಂರು ಹಾಗೂ ಅವರ ಭಾಷಾಭಿಮಾನದ ಬಗೆಗೆ ತಪ್ಪು ಕಲ್ಪನೆಗಳನ್ನು ಹಬ್ಬಿಸುತ್ತಿರುವ ಕುತಂತ್ರಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಮದರಸಾಗಳಲ್ಲಿ ಕನ್ನಡದಲ್ಲಿ ಭೋಧನೆ, ಮಕ್ಕಳಿಗೆ ಕನ್ನಡದಲ್ಲಿ ಬರೆಯುವ ಕೌಶಲ್ಯಗಳ ತರಬೇತಿಗಳು ಇರುವುದನ್ನು ತಿಳಿಸಿ, ಸಭಿಕರ ಗಮನ ಸೆಳೆದರು. ಇನ್ನೂ ತಾವು ಒಬ್ಬ ಹೆಮ್ಮೆಯ ಕನ್ನಡಿಗ ಮುಸಲ್ಮಾನನಾಗಿದ್ದು. ನನಗೆ ಉರ್ದು ಬರುವುದಿಲ್ಲ ಬದಲಾಗಿ ತಾನೊಬ್ಬ ಅಪ್ಪಟ ಕನ್ನಡಿಗ, ಹೇಗೆ ಎಂಬುದನ್ನ ನಿದರ್ಶನಗಳ ಮೂಲಕ ಹೇಳಿ ಜನರ ಮನಗೆದ್ದರು. ಸಮಾಜದಲ್ಲಿ, ಕನ್ನಡಿಗ ಮುಸಲ್ಮಾನರ ಭಾಷಾಭಿಮಾನ ಮತ್ತು ರಾಷ್ಟ್ರಾಭಿಮಾನದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕಿದೆ ಎಂದರು.