ಮಂದಿರ-ಮಸೀದಿ-ಚರ್ಚ್-ಗುರುದ್ವಾರ ಓಪನ್: ಹರಿದು ಬರುತ್ತಿರುವ ಭಕ್ತಗಣ: ಕೆಲವಡೆ ದರ್ಶನ ಪಡೆದು ಕಣ್ಣೀರಾದ ಭಕ್ತರು
ಹುಬ್ಬಳ್ಳಿ: ಕೇಂದ್ರ ಸರಕಾರದ ಆದೇಶದ ಮೇರೆಗೆ ಇಂದಿನಿಂದ ಮಂದಿರ-ಮಸೀದಿ-ಚರ್ಚ್-ಗುರುದ್ವಾರ ತೆರೆದಿದ್ದು, ಭಕ್ತರು ಭಕ್ತಿ-ಭಾವದಿಂದ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ಹುಬ್ಬಳ್ಳಿಯ ಶ್ರೀ ಸಿದ್ಧರೂಢ ಮಠದಲ್ಲಿ ಬೆಳಿಗ್ಗೆಯಿಂದಲೇ ಆರೂಢನ ದರ್ಶನ ಆರಂಭಗೊಂಡಿದ್ದು, ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಕಳೆದ 80 ದಿನದಿಂದ ದರ್ಶನ ಪಡೆಯದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಭಕ್ತರೊಬ್ಬರು, ದರ್ಶನ ಪಡೆದ ನಂತರ ಕಣ್ಣೀರಾಕಿದರು. ‘ಆರೂಢನ ದರ್ಶನವಿಲ್ಲದೇ ಮನಸ್ಸು ಘಾಸಿಯಾಗಿತ್ತು. ಇಂದು ದರ್ಶನ ಪಡೆದ ನಂತರ ಸಂತಸವಾಗಿದೆ’ ಎಂದರು.
ಹಳೇಹುಬ್ಬಳ್ಳಿ ಪತೇಶಾವಲಿ, ದೇಶಪಾಂಡೆನಗರದಲ್ಲಿನ ಗುರುದ್ವಾರ, ಸೇಂಟ್ ಫಿಲೋಮೀನಾ ಚರ್ಚ ಸೇರಿದಂತೆ ನಗರದ ಬಹುತೇಕ ಆಲಯಗಳು ತೆರೆದಿದ್ದು, ಭಕ್ತರು ಭಾವಪರವಶರಾಗಿ ದರ್ಶನ ಪಡೆಯುತ್ತಿದ್ದಾರೆ.