“ಆನಿಶೆಟ್ಟರ್”ಗೆ ಲಿಂಕ್ “ಮಾನಕರ ಪೊಲೀಸ್” ಮನೆಯಲ್ಲೂ ಶೋಧ..

ಧಾರವಾಡ: ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಸಹಾಯಕ ಆಯುಕ್ತರಾಗಿದ್ದ ಸಂತೋಷ ಆನಿಶೆಟ್ಟರ ಮೇಲೆ ಲೋಕಾಯುಕ್ತ ದಾಳಿ ಬೆಳಿಗ್ಗೆಯಿಂದ ನಡೆದಿದ್ದು, ಇಲ್ಲಿಂದ ಲಿಂಕ್ ಸಿಕ್ಕ ಪರಿಣಾಮ ಅವಳಿನಗರದ ಪೊಲೀಸ್‌ವೋರ್ವನ ಮನೆಯಲ್ಲಿ ತನಿಖೆ ನಡೆದಿದೆ.
ಧಾರವಾಡದ ಶಹರ ಪೊಲೀಸ್ ಠಾಣೆಯ ಮಾನಕರ ಎಂಬ ಪೊಲೀಸ್‌ರಿಗೆ ಸಂಬಂಧಿಸಿದ ಕೆಲವು ದಾಖಲೆಗಳು ಆನಿಶೆಟ್ಟರ ನಿವಾಸದಲ್ಲಿ ಸಿಕ್ಕಿದ್ದು, ಆ ಸಂಬಂಧ ಸತ್ತೂರಿನಲ್ಲಿರುವ ನಿವಾಸದಲ್ಲಿ ತನಿಖೆ ಮುಂದುವರೆದಿದೆ.
ಮಾನಕರ ಪೊಲೀಸ್ ನಗರದ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಈ ಸಮಯದಲ್ಲಿಯೂ ಹಲವು ದೂರುಗಳು ಕೇಳಿ ಬಂದಿದ್ದವು ಎನ್ನಲಾಗಿದೆ.