ಮಾನಕರ ಕೇಸ್ “ಬೇರೆ”- ಆನಿಶೆಟ್ಟರ ಕೇಸ್ “ಬೇರೆ”: ಇಬ್ಬರದ್ದು ಲೋಕಾಯುಕ್ತನಲ್ಲಿ ನಡೆದಿದೆ…

ಧಾರವಾಡ: ನಗರದ ಶಹರ ಪೊಲೀಸ್ ಠಾಣೆಯಲ್ಲಿರುವ ಶಿವಾನಂದ ಮಾನಕರ ಹಾಗೂ ಬೆಳಗಾವಿಯ ಪಾಲಿಕೆಯಲ್ಲಿ ಸಹಾಯಕ ಆಯುಕ್ತರಾಗಿದ್ದ ಸಂತೋಷ ಆನಿಶೆಟ್ಟರ ಮೇಲಿನ ಲೋಕಾಯುಕ್ತ ಪ್ರಕರಣಗಳು ಬೇರೆ ಬೇರೆಯಾಗಿದ್ದು, ತನಿಖೆಯೂ ಎರಡು ಸ್ತರದಲ್ಲಿ ನಡೆಯುತ್ತಿದೆ.
ಪೊಲೀಸ್ ಮಾನಕರ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ಆ ಸಂಬಂಧವಾಗಿ ಹಲವು ಮಹತ್ವದ ದಾಖಲೆಗಳನ್ನ ಅಧಿಕಾರಿಗಳು ಕ್ರೋಡಿಕರಿಸಿದ್ದಾರೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಸಂತೋಷ ಆನಿಶೆಟ್ಟರ ಅವರ ಮೇಲಿನ ತನಿಖೆಯು ವಿಭಿನ್ನ ಸ್ವರೂಪ ಪಡೆಯುತ್ತಿದ್ದು, ಆತನೊಂದಿಗೆ ಫಾರ್ಮ್ ಹೌಸ್ಗೆ ಮಜಾ ಉಡಾಯಿಸುತ್ತಿದ್ದ ಪತ್ರಕರ್ತರಿಬ್ಬರನ್ನ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈಗಾಗಲೇ ಪೊಲೀಸ್ ಮಾನಕರ ಮೇಲಿನ ದೂರಿಗೆ ಪೂರಕವಾದ ಮಹತ್ವವಾದ ದಾಖಲೆಗಳು ಕೂಡಾ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿವೆ ಎಂದು ಹೇಳಲಾಗುತ್ತಿದೆ.
ಈ ಎರಡು ಪ್ರಕರಣಗಳು ಧಾರವಾಡದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನ ಕಾದು ನೋಡಬೇಕಿದೆ.