“ಮಲೀಕ್ ಮರ್ಡರ್ ಕೇಸ್”- ಅಭಿಷೇಕ ಜಾಧವ, ಗಣೇಶ ಜಾಧವ ಬೆಂಡಿಗೇರಿ ಠಾಣೆ ಪೊಲೀಸ್ ವಶಕ್ಕೆ…
ಹುಬ್ಬಳ್ಳಿ: ಕಳೆದ ಒಂದು ವಾರದ ಹಿಂದೆ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ಯಾಮ ಜಾಧವ ಅವರ ಪುತ್ರರನ್ನ ಬೆಂಡಿಗೇರಿ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಕುರಿತು ಮಾಹಿತಿಯಿದೆ.
ಮಲೀಕ ಹತ್ಯೆಯಲ್ಲಿ ಭಾಗಿಯಾಗಿದ್ದ ಬಂಗಾರ ಬಾಲ್ಯಾ ಮತ್ತು ಮೊಹ್ಮದ ಮಲೀಕ್ ಎಂಬುವವರನ್ನ ಪೊಲೀಸರು ಬಂಧಿಸುವಾಗ ತಪ್ಪಿಸಿಕೊಳ್ಳಲು ಯತ್ನಿಸಿ, ಪೊಲೀಸರಿಂದ ಗಾಯಗೊಂಡು ಬಂಧನವಾಗಿದ್ದರು.
ಮಲೀಕ್ ಹತ್ಯೆಯ ಸಮಯದಲ್ಲಿ ಅಭಿಷೇಕ ಜಾಧವ ಮತ್ತು ಗಣೇಶ ಜಾಧವ ಅವರ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡು ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
