ಪೂಜೆ ಮುಗಿಸಿ ಮನೆಗೆ ಹೋಗುತ್ತಿದ್ದವನ ಮೇಲೆ ಮರ ಬಿದ್ದು ದುರ್ಮರಣ

ಉಡುಪಿ: ತಡರಾತ್ರಿ ಸುರಿದ ಭಾರೀ ಮಳೆಯಲ್ಲಿ ಪೂಜೆ ಮಾಡಿಸಿ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಮರ ಬಿದ್ದು ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಜಿಲ್ಲೆಯ ಕೊಲ್ಲೂರು ಮಾರ್ಗ ಹೆಬ್ರಿ ದೂಪದಕಟ್ಟೆ ಬೇಳಂಜೆಯಲ್ಲಿ ಸಂಭವಿಸಿದೆ.
ಹೆಬ್ರಿ ಬೆಳಂಜೆಯ ಪ್ರದೀಪ ಶೆಟ್ಟಿ ಎಂಬುವವರೇ ಸಾವಿಗೀಡಾಗಿದ್ದು, ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮನೆಗೆ ಹೋಗುವಾಗ ಜೋರಾಗಿ ಮಳೆ ಬರಲಾರಂಭಿಸಿದೆ. ಮಳೆ ಹೆಚ್ಚಾಗಬಹುದೆಂದುಕೊಂಡು ಈಗಲೇ ಮನೆಗೆ ಹೋದರೇ ಒಳ್ಳೆಯದೆಂದು ಹೊರಟು ನಿಂತಿದ್ದಾರೆ. ಮಳೆಯ ರಭಸದ ಸದ್ದಿನಲ್ಲಿ ಮರ ಬೀಳುವುದನ್ನ ನೋಡದೇ ಜೋರಾಗಿ ಸಾಗುತ್ತಿದ್ದಾಗಲೇ ಮರ ಮೇಲೆ ಬಿದ್ದು ಸ್ಥಳದಲ್ಲಿಯೇ ಸಾವಿಗೀಡಾದ್ದಾರೆ.
ರಸ್ತೆಯ ಮಧ್ಯದಲ್ಲೇ ದೊಡ್ಡದಾದ ಮರ ಬಿದ್ದಿದ್ದರಿಂದ ಕೆಳಗೆ ಸಿಕ್ಕಿದ್ದ ಪ್ರದೀಪರನ್ನ ತೆಗೆಯಲು ಕೂಡಾ ಆಗಿಲ್ಲ. ಹೀಗಾಗಿ ಮರ ಬಿದ್ದರೂ ಕೆಲಕಾಲ ನರಳಾಡಿ ಪ್ರಾಣವನ್ನ ಬಿಟ್ಟಿದ್ದಾರೆ. ಹೆಬ್ರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಜೆಸಿಬಿಯಿಂದ ಮರವನ್ನ ತೆಗೆದು ಶವವನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.