ನೀವು ಮಲಪ್ರಭಾ ನದಿ ಪಾತ್ರದವರಾ…? ಹುಷಾರಾಗಿರಿ ನೀರು ಬಿಡ್ತಾರಂತೆ…!
ಬೆಳಗಾವಿ/ನವಿಲುತೀರ್ಥ: ಮುಂಬೈ ಕರ್ನಾಟಕ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕರ್ನಾಟಕ ನೀರಾವರಿ ನಿಗಮ ನಿಯಮಿತ ನಿರ್ಧಾರವನ್ನ ತೆಗೆದುಕೊಂಡಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ನೀಡಿದೆ.
ಮಲಪ್ರಭಾ ನದಿಯಲ್ಲಿ ನೀರು ಹೆಚ್ಚಾಗುವುದನ್ನ ಕಡಿಮೆ ಮಾಡಲು ಕಾಲುವೆಗಳಿಗೆ ನೀರು ಹರಿಸಲು ಮುಂದಾಗುತ್ತಿದೆ. ಪ್ರವಾಹದ ಮಟ್ಟವನ್ನ ತಗ್ಗಿಸುವ ಉದ್ದೇಶದಿಂದ ಈ ಕ್ರಮ ಜರುಗಿಸಲಾಗುತ್ತಿದೆ.
ಕಳೆದ ಬಾರಿ ಮಲಪ್ರಭಾ ನದಿಯಿಂದಲೇ ಅನೇಕ ಗ್ರಾಮಗಳಲ್ಲಿ ನೀರು ಬಂದಿತ್ತು. ಪ್ರಮುಖವಾದ ರಸ್ತೆಗಳು ಹದಗೆಟ್ಟು ಹೋಗಿದ್ದವು. ಇದೇಲ್ಲವನ್ನ ಗಮನಿಸಿಯೇ ಈಗಿಂದಲೇ ನೀರು ಹರಿಸಲು ಸೂಪರಿಂಟೆಂಡೆಂಟ್ ಇಂಜಿನಿಯರ್ ಮುಂದಾಗಿ ಆದೇಶ ಹೊರಡಿಸಿದ್ದಾರೆ.
ಜನರು ನದಿ ಪಾತ್ರದಿಂದ ಸುರಕ್ಷಿತ ಸ್ಥಳದಲ್ಲಿರುವಂತೆ ಕೂಡಾ ಸೂಚನೆ ನೀಡಲಾಗಿದೆ.