ಮಕ್ತುಂ ಸೊಗಲದ ಓರ್ವ ಚೀಟರ್, ಅವರ ಪತ್ನಿ ಸುಳ್ಳು ಹೇಳ್ತಿದ್ದಾರೆ: ಕಾಂಗ್ರೆಸ್ನ ಫೈರೋಜ್ಖಾನ ಪಠಾಣ ಹೇಳಿದ್ದು…!!!
ಧಾರವಾಡ: ಕೆಲಗೇರಿ ಜಮೀನೊಂದರ ಪ್ರಕರಣದಲ್ಲಿ ಮಕ್ತುಂ ಸೊಗಲದ ಮೋಸ ಮಾಡಿದ್ದು, ಅವರಿಗೆ ನಾವು ಕೊಡಿಸಲು ಮುಂದಾಗಿದ್ದರಿಂದ ನನ್ನ ಮೇಲೆ ಸುಳ್ಳು ಆರೋಪವನ್ನ ಮಕ್ತುಂ ಸೊಗಲದ ಕುಟುಂಬ ಮಾಡುತ್ತಿದೆ ಎಂದು ಕಾಂಗ್ರೆಸ್ನ ಫೈರೋಜಖಾನ ಪಠಾಣ ಹೇಳಿಕೆ ನೀಡಿರುವ ವೀಡಿಯೋವನ್ನ ಕರ್ನಾಟಕವಾಯ್ಸ್.ಕಾಂಗೆ ಕಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮಕ್ತುಂ ಸೊಗಲದ ಪತ್ನಿ ರೇಷ್ಮಾ ಸೊಗಲದ ಸೇರಿ ಹಲವರು ಮನವಿ ಸಲ್ಲಿಸಿ, ಫೈರೋಜಖಾನ ಪಠಾಣ ಸೇರಿದಂತೆ ಅನೇಕರು ತೊಂದರೆ ಕೊಡುತ್ತಿರುವುದಾಗಿ ಆರೋಪಿಸಿದ್ದರ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನ ಬಿಡುಗಡೆ ಮಾಡಿದ್ದಾರೆ.
ಪೂರ್ಣ ವೀಡಿಯೋ…
ಕಳೆದ ಐದಾರು ತಿಂಗಳಿಂದ ಆತನ ಜೊತೆ ಸಂಪರ್ಕವಿಲ್ಲ. ಆತ ಹಗಲಿನಲ್ಲೇ ಮೊಬೈಲ್ ರಿಸೀವ್ ಮಾಡಲ್ಲ. ರಾತ್ರಿ ಏಕೆ ಮಾಡುತ್ತೇನೆ ಎಂದು ಫೈರೋಜಖಾನ ಪಠಾಣ ಪ್ರಶ್ನಿಸಿದ್ದಾರೆ.
