ಗ್ರಾಮೀಣ ಪ್ರತಿಭೆ ಮಗುದುಮ್ ತೋರಗಲ್ಗೆ ಪಿಎಚ್ಡಿ ಪದವಿ
1 min readಧಾರವಾಡ: “ಸ್ಟಡೀಸ್ ಆನ್ ಕ್ಲಿನಿಕಲ್ ಆ್ಯಂಡ್ ಮಾಲಿಕ್ಯುಲರ್ ಇನ್ವೆಷ್ಟಿಗೇಷನ್ ಆಫ್ ಮೆಲ್ ಇನಫರ್ಟಿಲಿಟಿ ಫ್ರಮ್ ಸೆಲೆಕ್ಟೆಡ್ ಹಾಸ್ಪಿಟಲ್ಸ್” ಎಂಬ ವಿಷಯದ ಕುರಿತು ಮಗುದುಮ್ ಮೌಲಾಸಾಬ ತೋರಗಲ್ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯವು ಪಿ.ಹೆಚ್.ಡಿ. ಪದವಿ ನೀಡಿದೆ.
ಇವರಿಗೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ಹಾಗೂ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿರುವ ಪ್ರೋಫೆಸರ್ ಎಂ.ಬಿ.ಹಿರೇಮಠ ಅವರು ಮಾರ್ಗದರ್ಶಕರಾಗಿದ್ದರು.
ಪುರುಷರಲ್ಲಿ ಕಂಡು ಬರುವ ಬಂಜೆತನಕ್ಕೆ ಕಾರಣಗಳು ಹಾಗೂ ಅದಕ್ಕೆ ಕಂಡುಕೊಳ್ಳಬಹುದಾದ ಪರಿಹಾರಗಳ ಕುರಿತು ಎಂ.ಬಿ.ಹಿರೇಮಠ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ. ಪರಿಣಿತಿ ಪಡೆದಿರುವ ತೋರಗಲ್ ಅವರು ಉತ್ತರ ಕರ್ನಾಟಕವನ್ನು ಮೂಲಭೂತವಾಗಿ ಇರಿಸಿಕೊಂಡು ಅಧ್ಯಯನ ನಡೆಸಿದ್ದು ವಿಶೇಷ.