“ಮಾಸ್ತರ್” ಆದ “ಮೇಜರ್” ಸಿದ್ಧಲಿಂಗಯ್ಯ…!

ಧಾರವಾಡ: ಶಿಕ್ಷಣ ಇಲಾಖೆಯ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಅವರು ಧಾರವಾಡ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪಾಠ ಹೇಗೆ ಮಾಡಿದ್ದಾರೆ ನೋಡಿ..
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು, ಈ ರಾಜ್ಯ ಕಂಡ ಅಪರೂಪದ ಶಿಕ್ಷಣ ಇಲಾಖೆ ಆಯುಕ್ತರು ಮೇಜರ್ ಸಿದ್ಧಲಿಂಗಯ್ಯನವರು ಎಂದು ಅಭಿಪ್ರಾಯಪಟ್ಟಿದೆ.
ಸ್ವತಃ ಬೋಧನೋಪಕರಣಗಳನ್ನು ಬಳಸಿ ಸಾಮಾನ್ಯ ಶಿಕ್ಷಕರಂತೆ ಧಾರವಾಡ ನಗರದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಶಿಕ್ಷಣ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಸಮಾಜ ವಿಜ್ಞಾನ ಪಾಠವನ್ನು ಮಾಡಿರುವ ಸಂಗತಿ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾಗಿರುವ ನಮಗೆಲ್ಲ ಅತೀವ ಸಂತೋಷವನ್ನ ಮೂಡಿಸಿದೆ ಎಂದು ಹೇಳಿದ್ದಾರೆ.
ಶಾಲೆಗೆ ಆಗಮಿಸಿ ಪಾಠ ಮಾಡಿದ್ದು ಸ್ವಾತಂತ್ರ್ಯೋತ್ತರ ಶೈಕ್ಷಣಿಕ ಆಡಳಿತದ ವ್ಯವಸ್ಥೆಯಲ್ಲಿ ಇವರೊಬ್ಬ ಮಾದರಿ ಅಧಿಕಾರಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲ ವೃತ್ತಿಬಾಂಧವರು ಅವರ ಮಾರ್ಗದರ್ಶನದಲ್ಲಿ ಆಶೋತ್ತರಗಳಿಗೆ ಇನ್ನಷ್ಟು ಸ್ಪಂದನಾಶೀಲತೆಯಿಂದ ವೃತ್ತಿಪರತೆಯನ್ನು ಕ್ರಿಯಾಶೀಲಗೊಳಿಸಿಕೊಳ್ಳುತ್ತೇವೆ ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ.ಸಿ.ಉಪ್ಪಿನ, ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ, ಕಾರ್ಯಾಧ್ಯಕ್ಷ ಶರಣಪ್ಪಗೌಡ್ರ, ಕೋಶಾಧ್ಯಕ್ಷ ಎಸ್.ಎಫ್.ಪಾಟೀಲ, ಉಪಾಧ್ಯಕ್ಷ ಗೋವಿಂದ ಜುಜಾರೆ, ಎಮ್.ಆಯ್.ಮುನವಳ್ಳಿ, ಜಿಲ್ಲಾಧ್ಯಕ್ಷ ಅಕ್ಬರಲಿ ಸೊಲ್ಲಾಪೂರ, ಜಿಲ್ಲಾ ಪ್ರ.ಕಾ.ರಾಜೀವ್ ಸಿಂಗ್ ಹಾಗೂ ಎಲ್ಲಾ ಪದಾಧಿಕಾರಿಗಳು ವಿಭಾಗದ ಸಮಸ್ತ ಗ್ರಾಮೀಣ ಶಿಕ್ಷಕ ನೇತಾರರು ಆಯುಕ್ತರ ವಿಶಿಷ್ಟ ಕಾರ್ಯಶೈಲಿಗೆ ಕಾರ್ಯವೈಖರಿಗೆ ಅಭಿಮಾನದ ಅಭಿನಂದನೆಗಳನ್ನು ಅರ್ಪಿಸಿದ್ದಾರೆ.