ಮೇಜರ್ ಸಿದ್ಧಲಿಂಗಯ್ಯ ಚಡ್ಡಿಯಲ್ಲಿ: ಮುಜುಗರಕ್ಕೀಡಾದ ಶಿಕ್ಷಣ ಸಚಿವ ಸುರೇಶಕುಮಾರ..!
1 min readಧಾರವಾಡ: ದಿನಬೆಳಗಾದರೇ ಶಿಸ್ತು.. ಶಿಸ್ತು ಎಂದು ಹೇಳಿಕೊಳ್ಳುವ ಶಿಕ್ಷಣ ಇಲಾಖೆಯ ಆಪರ್ ಆಯುಕ್ತ ಮೇಜರ ಸಿದ್ಧಲಿಂಗಯ್ಯ, ಇಂದು ಶಿಕ್ಷಣ ಸಚಿವರ ಸಮ್ಮುಖದಲ್ಲೇ ಅಶಿಸ್ತಿಯಿಂದ ನಡೆದುಕೊಂಡು, ಅವರನ್ನೂ ಮುಜುಗರಕ್ಕೀಡು ಮಾಡಿದ ಘಟನೆಯ ಪೋಟೋಗಳೀಗ ವೈರಲ್ ಆಗಿವೆ.
ಶಿಕ್ಷಣದಲ್ಲಿ ಶಿಸ್ತು ಇರಬೇಕೆಂದು ಸದಾಕಾಲ ಬಯಸುವ ಮತ್ತು ತಮ್ಮ ವ್ಯಾಪ್ತಿಗೆ ಬರುವ ಸರಕಾರಿ ಶಾಲೆಗಳಿಗೆ ಹೋದಾಗ ಹೇಳಿಕೊಳ್ಳುತ್ತಿದ್ದ ಮೇಜರ್ ಸಿದ್ಧಲಿಂಗಯ್ಯ, ಚಡ್ಡಿಯಲ್ಲೇ ಸಚಿವರಿಂದ ಸನ್ಮಾನ ಸ್ವೀಕರಿಸಿದ್ದಾರೆ. ಇದು ಯಾವ ಶಿಸ್ತು ಎನ್ನುವ ವ್ಯಂಗ್ಯದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸಚಿವ ಸುರೇಶಕುಮಾರ ಅವರ ಮಹತ್ವಾಕಾಂಕ್ಷೆಯ ಶಿಕ್ಷಣ ಇಲಾಖೆಯ ಕಡತ ವಿಲೇವಾರಿ ಕಾರ್ಯಕ್ರಮದಲ್ಲಿ ಡಿಡಿಪಿಐ ಮೋಹನಕುಮಾರ ಹಂಚಾಟೆ ಜೊತೆಗೆ ಸತ್ಕಾರ ಮಾಡಿಸಿಕೊಂಡ ಆಪರ್ ಆಯುಕ್ತರಾಗಿರುವ ಮೇಜರ್ ಸಿದ್ಧಲಿಂಗಯ್ಯ, ಇಲಾಖೆಯ ಸಚಿವರೆದುರೇ ಹೀಗೆ ನಡೆದುಕೊಂಡಿದ್ದು, ಸರಿಯೇ ಎಂಬ ಪ್ರಶ್ನೆ ಮೂಡಿದೆ.
ಶಿಕ್ಷಣ ಇಲಾಖೆಯ ಆಪರ ಆಯುಕ್ತರಾಗಿ ಆಗಾಗ ವರ್ಗಾವಣೆಯಾಗಿ ಮತ್ತದೇ ಜಾಗಕ್ಕೆ ಬರುತ್ತಿರುವ ಮೇಜರ್ ಸಿದ್ಧಲಿಂಗಯ್ಯನವರು, ಮಾಡಿದ್ದು ಸರಿಯೇ. ಚಡ್ಡಿ ಹಾಕಿಕೊಂಡು ತಮ್ಮದೇ ಇಲಾಖೆಯ ಸಚಿವರ ಪಕ್ಕದಲ್ಲಿ ಕೂಡುವುದು ಮತ್ತೂ ಸತ್ಕರಿಸಿಕೊಳ್ಳುವುದು ಶಿಸ್ತಿನಲ್ಲೇ ಬರುತ್ತಾ…!? ಮೇಜರ್ ಸಾಹೇಬ್ರೇ ಉತ್ತರ ಕೊಡಬೇಕು…