ಏಳ್ ಕೋಟಿ.. ಏಳು ಕೋಟಿ.. ಏಳ್ ಕೋಟೀ..ಗ್ಯೋ.. ಚಾಂಗ್ ಮಲೋ…

ಹಾವೇರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಕಳೆದ ಮೂರು ವರ್ಷದ ಹಿಂದೆ ಹೆಲಿಕಾಪ್ಟರ ದೇವಸ್ಥಾನದ ಮೇಲೆ ಹೋದ ಪರಿಣಾಮ ಸಂಕಷ್ಟ ಎದುರಿಸಿದರೂ ಎನ್ನುವ ನಂಬಿಕೆಯನ್ನ ಹೋಗಲಾಡಿಸಲು ಸ್ವತಃ ಡಿ.ಕೆ.ಶಿವುಕುಮಾರ ಇಂದು ಶ್ರೀಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಸ್ನಾನ ವಿಧಿ ಪೂಜೆ ಸಲ್ಲಿಸುವ ಮೂಲಕ, ಭಕ್ತರ ನಂಬಿಕೆಯನ್ನ ಮತ್ತಷ್ಟು ಹೆಚ್ಚು ಮಾಡಿದ್ರು.
ರುದ್ರಸ್ನಾನದ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..
ಹುಬ್ಬಳ್ಳಿಯಿಂದ ನೇರವಾಗಿ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಶಿವುಕುಮಾರ ಅವರು, ಶಾಪದಿಂದ ವಿಮುಕ್ತಿ ಹೊಂದುವ ಭರವಸೆಯನ್ನಿಟ್ಟುಕೊಂಡು ರುದ್ರಸ್ನಾನ ವಿಧಿ, ರುದ್ರಾಭಿಷೇಕ ಮತ್ತು ಕುಂಕುಮಾರ್ಚನೆಯನ್ನ ನಡೆಸಿದರು.
ಮೈಲಾರಲಿಂಗೇಶ್ವರ ಕಾರ್ಣಿಕ ನಡೆಯುವ ಸಮಯದಲ್ಲಿ ಡಿ.ಕೆ.ಶಿವುಕುಮಾರ 2017ರಲ್ಲಿ ಭಾಗವಹಿಸಿದ್ದರು. ಆಗ ಹೆಲಿಕಾಪ್ಟರ ಮೂಲಕ, ದೇವಸ್ಥಾನದ ಮೇಲ್ಬಾಗದಿಂದ ಸಂಚಿರಿಸಿದ್ದರು. ಹೀಗೆ ಸಂಚಾರ ಮಾಡಿದ್ದರಿಂದಲೇ, ಶಿವುಕುಮಾರ ಅವರು ಜೈಲುವಾಸ ಅನುಭವಿಸುವ ಹಾಗಾಯಿತು ಎನ್ನುವುದು ಭಕ್ತರ ನಂಬಿಕೆಯಾಗಿತ್ತು.