ನಾನು ಸತ್ತರೆ ಗೃಹ ಸಚಿವ ಬೊಮ್ಮಾಯಿ, ಪ್ರವೀಣ ಸೂದರೇ ಕಾರಣ…!

ಧಾರವಾಡ: ಒಂದು ಎಕರೆ ಜಮೀನು, ತರಕಾರಿ ಮಾರಾಟ ಮಾಡುವ ಪಾಲಕರು, ಕಂಡ ಕನಸು ನನಸು ಮಾಡಿಕೊಳ್ಳಲು ಸರಕಾರದ ರೂಲ್ಸ್ ಗಳ ತೊಂದರೆ. ಹೀಗೆಂದುಕೊಂಡ ಯುವಕನೋರ್ವ ತಾನು ಸಾವಿಗೆ ಶರಣಾದರೇ ಗೃಹ ಮಂತ್ರಿ, ಡಿಜಿ&ಐಜಿಪಿ ಹಾಗೂ ಸರಕಾರವೇ ಹೊಣೆಯಂದು ಪತ್ರವೊಂದನ್ನ ಬರೆದಿದ್ದಾರೆ.

ಧಾರವಾಡ ತಾಲೂಕಿನ ತಿಮ್ಮಾಪುರ ಗ್ರಾಮದ ಮೈಲಾರ ಸುಣಗಾರ ಎಂಬ ಯುವಕನೇ ಹೀಗೊಂದು ಪತ್ರವೊಂದನ್ನ ಬರೆದಿದ್ದು. ಮೂರು ಮಕ್ಕಳ ಕುಟುಂಬದಲ್ಲಿ ಈತ ಪೊಲೀಸ್ ನೌಕರಿ ಪಡೆಯಲು ಪ್ರಯತ್ನ ಮಾಡುತ್ತಲೇ ಬಂದಿದ್ದಾನೆ. ಕಳೆದ ಎರಡು ಬಾರಿ ಪೊಲೀಸ್ ಕಾನ್ಸಟೇಬಲ್ ಪರೀಕ್ಷೆ ಬರೆದರೇ, ಒಂದೇ ಒಂದು ಅಂಕದಿಂದ ಪೇಲ್ ಆಗಿದ್ದಾನೆ. ಹಾಗಂತ ಕನಸು ಬಿಟ್ಟಿಲ್ಲ. ಆದರೆ, ಆತನೀಗ ವಯಸ್ಸಿನ ಸಮಸ್ಯೆಯನ್ನ ಎದುರಿಸುತ್ತಿದ್ದಾನೆ.
ಪೊಲೀಸ್ ನೇಮಕಾತಿಯನ್ನ ಮಾಡದೇ ಇರುವುದರಿಂದ ತನಗೆ ಏಪ್ರೀಲ್ 25ಕ್ಕೆ, ನೇಮಕಾತಿಗೆ ಅವಶ್ಯವಿರುವ ವಯಸ್ಸು ಮುಗಿಯುತ್ತದೆ. ಅಷ್ಟರೊಳಗೆ ತಾವು ಪೊಲೀಸ್ ಹುದ್ದೆಗೆ ನೇಮಕಾತಿ ಆರಂಭಿಸದೇ ಇದ್ದಲ್ಲಿ, ನನ್ನ ಸಾವಿಗೆ ನೀವೇ ಕಾರಣವಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾನೆ.
ಬಡತನದಲ್ಲಿ ಬೆಂದು ಬದುಕು ಕಟ್ಟಿಕೊಳ್ಳುವ ಮನಸ್ಸಿಗೆ ವಯಸ್ಸಿನ ಅಡ್ಡಿಯಾಗಿರುವುದು ಇಂತಹ ಪತ್ರ ಬರೆಯೋದಕ್ಕೆ ಕಾರಣವಾಗಿದೆ ಎಂದರೇ ತಪ್ಪಾಗಲಾರದು, ಈ ಬಗ್ಗೆ ಸರಕಾರ ಯಾವ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ.