“ಮಹೇಶ ಟೆಂಗಿನಕಾಯಿ” ಅಂದರೇ “ಬಕೆಟ್”- ಹುಡಾ EX ಪ್ರೆಸಿಡೆಂಟ್ “ಟಿಂಗಲ್”…

ಹುಬ್ಬಳ್ಳಿ: ಶಾಸಕ ಮಹೇಶ ಟೆಂಗಿನಕಾಯಿ ಅಂದರೇ ಬಕೆಟ್ ಎಂದು ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಬಗ್ಗೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಮಾತನಾಡಿದ ಬೆನ್ನಲ್ಲೇ, ಶೆಟ್ಟರ್ ಅವರ ಆಪ್ತ ಬಳಗದ ನಾಗೇಶ ಕಿಡಿ ಕಾರಿದ್ದಾರೆ. ತಮ್ಮ ಫೇಸ್‌ಬುಕ್ ಪೇಜಿನಲ್ಲಿ ಹೀಗಳಿದಿದ್ದಾರೆ.
ವಾರ್ಡ್ ಮಟ್ಟದಲ್ಲಿ ಯಾವುದೇ ಸಂಘಟನೆ ಮಾಡದೇ ಬಿಜೆಪಿಯ ಬಿ.ಎಲ್.ಸಂತೋಷ ಅವರ ಬಕೆಟ್ ಹಿಡಿದು ಅವಕಾಶ ಪಡೆದಿರುವುದು ರಾಜ್ಯಕ್ಕೆ ಗೊತ್ತಿದೆ ಎಂದು ಕಲಬುರ್ಗಿ ಹೀಯಾಳಿಸಿದ್ದಾರೆ.