ಧಾರವಾಡ: “ಧರಣಿ”ಗೆ ಮಹೇಶ ಶೆಟ್ಟಿ ಅಧ್ಯಕ್ಷ, ಈರೇಶ ಅಂಚಟಗೇರಿ ಉಪಾಧ್ಯಕ್ಷ… ‘ಜೋಡಿ ಗತ್ತು”…!!!
ಧರಣಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಚುನಾವಣೆಯಲ್ಲಿ ಮಹೇಶ ಶೆಟ್ಟಿ ಹಾಗೂ ಈರೇಶ ಅಂಚಟಗೇರಿ ತಂಡಕ್ಕೆ ಜಯ
ಧಾರವಾಡ: ಧರಣಿ ಅರ್ಬನ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಚುನಾವಣೆಯಲ್ಲಿ, ಖ್ಯಾತ ಹೋಟೆಲ್ ಉದ್ಯಮಿದಾರರು ಮಹೇಶ ಶೆಟ್ಟಿ ಹಾಗೂ ಈರೇಶ ಅಂಚಟಗೇರಿ ಅವರ ತಂಡ ಮೇಲುಗೈ ಸಾಧಿಸಿದೆ.
13 ಸ್ಥಾನದಲ್ಲಿ, 11 ಸ್ಥಾನ ಗಳಿಸಿ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿದಿದ್ದು ಚುನಾವಣಾಧಿಕಾರಿ ಲಿಂಗರಾಜ ಪಾಟೀಲ ಅವರು ಪ್ರಮಾಣಪತ್ರ ನೀಡಿ ಆಯ್ಕೆಯನ್ನು ಘೋಷಿಸುವ ಮೂಲಕ ಪದಾಧಿಕಾರಿಗಳು ಅಧಿಕೃತವಾಗಿ ಆಯ್ಕೆಯಾದರು.

ಅಧ್ಯಕ್ಷರಾಗಿ ಮಹೇಶ ಶೆಟ್ಟಿ, ಉಪಾಧ್ಯಕ್ಷರಾಗಿ ಈರೇಶ ಅಂಚಟಗೇರಿ, ನಿರ್ದೇಶಕರಾಗಿ ವೀರಣ್ಣ ಯಳಲ್ಲಿ, ವೈ.ಬಿ. ಪಾಟೀಲ, ರವೀಂದ್ರ ಶೆಟ್ಟಿ, ಶರಣಬಸಪ್ಪ ಸವಡಿ, ಭರತ ಭಂಡಾರಿ, ಮನೋಜ ಭಂಡಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕಳೆದ 11 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು, ಧಾರವಾಡದ ಅತ್ಯುತ್ತಮ ಸಹಕಾರಿ ಬ್ಯಾಂಕ ಎಂದು ಹೆಸರು ಪಡೆದಿರುವ ಧರಣಿ ಬ್ಯಾಂಕಗೆ , ಮುಂದಿನ 5 ವರ್ಷಗಳ ಕಾಲ 2026 ರಿಂದ 2031 ರ ಅವಧಿಗೆ ನಡೆದಂತ ಚುನಾವಣೆಯಲ್ಲಿ ಮಹೇಶ ಶೆಟ್ಟಿ ಹಾಗು ಈರೇಶ ಅಂಚಟಗೇರಿ ಅವರ ತಂಡ ಸಂಪೂರ್ಣ ವಿಜಯಶಾಲಿಯಾಗಿದೆ.
(ಬಾಕ್ಸ- ಆಡಳಿತ ಮಂಡಳಿಯಿಂದ ಅಭಿನಂದನೆ ಸಲ್ಲಿಕೆ-
ಕಳೆದ ಹನ್ನೊಂದು ವರ್ಷಗಳ ಕಾಲ ಮಹೇಶ್ ಶೆಟ್ಟಿಯವರ ನೇತೃತ್ವದಲ್ಲಿ ಸೇವೆ ಸಲ್ಲಿಸಿ, ಧಾರವಾಡ ಹಾಗು ಸುತ್ತಮುತ್ತಲಿನ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದು, ಮುಂಬರುವ ಅವಧಿಗೆ ಮಹೇಶ ಶೆಟ್ಟಿ ಹಾಗು ಈರೇಶ ಅಂಚಟಗೇರಿ ನೇತೃತ್ವದಲ್ಲಿ ಮತ್ತೊಮ್ಮೆ ದಿಗ್ವಿಜಯ ಸಾಧಿಸಿ ಮುಂಬರುವ ಐದು ವರ್ಷಗಳ ಕಾಲ ಆಡಳಿತ ಸಲ್ಲಿಸಲು ಅನುವು ಮಾಡಿ ವಿಜಯಶಾಲಿ ಮಾಡಿದ ಸಮಸ್ತರಿಗು ಧನ್ಯವಾದಗಳು ಎಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅಭಿನಂದನೆ ತಿಳಿಸಿದರು.)
