“ಪಂಚಪೀಠ”ಗಳ ಮಾದರಿಯಲ್ಲಿ 7ಜಿಲ್ಲೆಗಳಲ್ಲಿ “ಸ್ಮಾರಕ ರಚಿಸಿ”- ಮಹೇಂದ್ರ ಕೌತಾಳ ಮನವಿ…
1 min readಹುಬ್ಬಳ್ಳಿ: ರಾಜ್ಯದ ಬಜೆಟ್ ನಲ್ಲಿ ಉತ್ತಮವಾದ ನಿರ್ಣಯ ತೆಗೆದುಕೊಳ್ಳುವ ಮೂಲಕ ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕೆಂದು ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಮಹೇಂದ್ರ ಕೌತಾಳ ಮನವಿ ಮಾಡುಕೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿರುವ ಮಹೇಂದ್ರ ಕೌತಾಳ, ಪಂಚ ಪೀಠಗಳ ಮಾದರಿಯಲ್ಲಿ ಸ್ಮಾರಕ ರಚನೆಗೆ 25 ಕೋಟಿ ರೂಪಾಯಿ ನೀಡುವಂತೆ ಕೇಳಿಕೊಂಡಿದ್ದಾರೆ.
ಮಹೇಂದ್ರ ಕೌತಾಳ ಮಾಡಿಕೊಂಡ ಮನವಿ…
ಮನವಿ ಪತ್ರ
ಎಸ್ ಸಿ ಮತ್ತು ಎಸ್ ಟಿ ಸಮುದಾಯದ ಅಭಿವೃದ್ಧಿಗಾಗಿ ಉತ್ತಮ ಕಾರ್ಯಕ್ರಮಗಳನ್ನು ಬಜೆಟ್ನಲ್ಲಿ ರೂಪಿಸುವಂತೆ
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಇವರಿಗೆ
ರಾಜ್ಯ ಎಸ್ ಸಿ ಮೋರ್ಚಾ ಕಾರ್ಯದರ್ಶಿಗಳಾದ
ಶ್ರೀ ಮಹೇಂದ್ರ ಕೌತಾಳ ಅವರ ಮನವಿ
ಪ್ರಧಾನಮಂತ್ರಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಪಂಚಪೀಠಗಳ ಮಾದರಿಯಲ್ಲಿ
ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ರಾಜ್ಯಕ್ಕೆ ಪಾದಸ್ಪರ್ಶ ಮಾಡಿರುವ ಏಳು ಜಿಲ್ಲೆಗಳು.
1.ಬೆಳಗಾವಿ-10-4-1925.
2.ಧಾರವಾಡ-28-12-1929.
3.ವಿಜಯಪುರ-19-5-1937.
4.ಗುಲ್ಬರ್ಗಾ -19-9-1944. 5.ಬೆಂಗಳೂರು- 1954.
6.ಹಾಸನ -1954
- ಕೆಜಿಎಫ್, ಕೋಲಾರ 12-7-1954
ಏಳು ಜಿಲ್ಲೆಗಳಲ್ಲಿ ಸ್ಮಾರಕಗಳನ್ನು ನಿರ್ಮಿಸಲು 25 ಕೋಟಿ ಬಜೆಟ್ನಲ್ಲಿ
ಮೀಸಲ ಬಿಡಬೇಕು ವಿನಂತಿಸಿಕೊಳ್ಳುತ್ತೇವೆ
ಹಾಗೂ ಎಸ್ಸಿ/ಎಸ್ಟಿ ಪದವೀಧರರಿಗೆ ಹರಿಯಾಣ ಮತ್ತು ಇತರೆ ರಾಜ್ಯ ದಲ್ಲಿ ನೀಡುತ್ತಿರುವಂತೆ ನಿರುದ್ಯೋಗ ಬಟ್ಟೆಯನ್ನು ನೀಡಬೇಕೆಂದು ಮತ್ತು ದಲಿತ ನಿರ್ಗತಿಕರಿಗೆ ಮನೆ ಕಟ್ಟಲು ರಾಜ್ಯ ಸರ್ಕಾರ ನೀಡುತ್ತಿರುವ 1. 75 ಲಕ್ಷ ಸಾಲುವುದಿಲ್ಲ 5 ಲಕ್ಷದವರೆಗೆ ಬಜೆಟ್ನಲ್ಲಿ ಘೋಷಿಸಬೇಕೆಂದು ಮನವಿಯನ್ನು ಮಾಡುತ್ತೇವೆ.