ಮಹಾಕುಂಭ ಮೇಳದಲ್ಲಿ “ಧಾರವಾಡದ ಧಣಿ”- ಜನರ ನೆಮ್ಮದಿಗಾಗಿ ತ್ರಿವೇಣಿ ಸಂಗಮದಲ್ಲಿ ವಿಶೇಷ ಪೂಜೆ…!!!

ಉತ್ತರಪ್ರದೇಶ: ಜನವರಿ 13 ರಿಂದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಧಾರವಾಡ-71 ಕ್ಷೇತ್ರದ ಮಾಜಿ ಶಾಸಕ ಅಮೃತ ದೇಸಾಯಿ ಅವರು ಕುಟುಂಬ ಸಮೇತರಾಗಿ ಭಾಗವಹಿಸಿದರು.
ಫೆಬ್ರುವರಿ 26 ರವರೆಗೆ ನಡೆಯಲಿರುವ ಮೇಳದಲ್ಲಿ ಭಾಗವಹಿಸಿದ ಅವರು, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು.
ಕ್ಷೇತ್ರದ ಜನರ ನೆಮ್ಮದಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಶಾಸಕ ಅಮೃತ ದೇಸಾಯಿ ಅವರು, ನಾಡಿನ ಒಳತಿಗಾಗಿಯೂ ಪ್ರಾರ್ಥಿಸಿದರು.