ನಾಳೆ ಮಹದೇವ ಮಾಳಗಿ ಮನೆಗೆ ಸಚಿವ ಸುರೇಶಕುಮಾರ ಭೇಟಿ: “ಕರ್ನಾಟಕವಾಯ್ಸ್ ಸಿಕ್ಕ ಮನ್ನಣೆ”
ಧಾರವಾಡ: ಕರ್ನಾಟಕವಾಯ್ಸ್.ಕಾಂ ಹೊರ ಹಾಕಿದ್ದ ಶಿಕ್ಷಣ ಇಲಾಖೆ ಅಧಿಕಾರಿಯ ನೋವನ್ನ, ಹಾಗೂ ಅವರ ಹಲವು ದಿನಗಳ ಕಷ್ಟವನ್ನ ಬಗೆಹರಿಸಲು ಪ್ರಯತ್ನ ಪಟ್ಟಿದ್ದು ಬಹುತೇಕರಿಗೆ ಗೊತ್ತೆಯಿದೆ. ಗ್ರಾಮೀಣ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನರ ಮನವಿಗೆ ಸ್ಪಂಧಿಸಿದ್ದು ನಿಮ್ಮದೇ ಧ್ವನಿಯಾಗಿರುವ ಕರ್ನಾಟಕವಾಯ್ಸ್. ಈಗ ಮತ್ತೊಂದು ಖುಷಿಯ ವಿಚಾರವನ್ನ ನಿಮಗೆ ತಿಳಿಸುತ್ತಿದೆ ನೋಡಿ.
ಈ ವೀಡೀಯೋ ನೋಡಿ.. ಸಮಯ ಮತ್ತು ದಿನಾಂಕ ಯಾವದೆಂದು ತಿಳಿದುಕೊಳ್ಳಿ
ಈ ಹಿಂದೆ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನ ಅಲಂಕರಿಸಿದ್ದ ಮಹದೇವ ಮಾಳಗಿಯವರ ಕುಟುಂಬದ ನೋವು ಏನಿತ್ತು ಎಂಬುದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ನಿಮ್ಮದೇ ಕರ್ನಾಟಕವಾಯ್ಸ್. ಕಾಂ, ಅದನ್ನ ನೋಡಿದ್ದ ಸಚಿವ ಸುರೇಶಕುಮಾರ 12 ಗಂಟೆಯಲ್ಲಿ ಆ ಕುಟುಂಬದೊಂದಿಗೆ ಮಾತನಾಡಿದ್ದರು. ಅಷ್ಟೇ ಅಲ್ಲ, ಶಿಕ್ಷಕರ ದಿನಾಚರಣೆಯಂದೇ ಅವರಿಗೆ ಸ್ವಯಂ ನಿವೃತ್ತಿಯನ್ನ ನೀಡುವ ಮೂಲಕ ಔದಾರ್ಯ ತೋರಿಸಿದ್ದರು. ಕರ್ನಾಟಕವಾಯ್ಸ್ ಅವತ್ತು ಗೆಲುವಾಗಿತ್ತು.
ಅವತ್ತು ಕರ್ನಾಟಕವಾಯ್ಸ್.ಕಾಂ ನಲ್ಲಿ ಬಂದಿದ್ದ ಮಾಹಿತಿ ಇದು..
http://karnatakavoice.com/2020/08/28/beo-education-minister/
ಅದಾದ ನಂತರ ಆ ಕುಟುಂಬಕ್ಕೆ ನೌಕರಿ ಕೊಡಿಸಬೇಕೆಂಬ ಗ್ರಾಮೀಣ ಸಂಘದ ಅಶೋಕ ಸಜ್ಜನ ಕೋರಿಕೆಯನ್ನ ಕರ್ನಾಟಕವಾಯ್ಸ್ ಸಚಿವರಿಗೆ ಮುಟ್ಟಿಸುವ ಪ್ರಯತ್ನವನ್ನ ಮಾಡಿತ್ತು. ಇದೀಗ ಸ್ವತಃ ಸಚಿವ ಸುರೇಶಕುಮಾರರೇ ಮಹದೇವ ಮಾಳಗಿಯವರ ಮನೆಗೆ ಭೇಟಿ ನೀಡುತ್ತಿದ್ದಾರೆ.
ಮಹದೇವ ಮಾಳಗಿಯವರ ಮನೆಗೆ ಭೇಟಿ ನೀಡಿದಾಗ ಅವರ ಪತ್ನಿಗೆ ನೌಕರಿ ಕೊಟ್ಟರೇ ಸಾಕು ಎನ್ನುವುದು ಎಲ್ಲರ ಬಯಕೆಯಾಗಿದೆ. ಗ್ರಾಮೀಣ ಸಂಘದ ಪ್ರಯತ್ನಕ್ಕೆ ಮತ್ತಷ್ಟು ಬಲ ಬಂದಿದ್ದು, ಸಚಿವ ಸುರೇಶಕುಮಾರ ಭೇಟಿ ಮಾಳಗಿಯವರ ಕುಟುಂಬಕ್ಕೆ ವರದಾನವಾಗಲಿ ಎನ್ನುವುದು ಕರ್ನಾಟಕವಾಯ್ಸ್ ಬಯಕೆ ಕೂಡಾ ಆಗಿದೆ.
ಕೆಲವರು ಈ ಮಾಹಿತಿಯನ್ನ ನಾವೂ ಮಾಡಿದ್ದು, ನಾನೂ ಮಾಡಿದ್ದು ಎಂದು ಹಲಬುತ್ತಿದ್ದಾರೆ. ಜೀವನ ನಡೆಸಲು ಕಷ್ಟವಾದವರಿಗೆ ಬೆಳಕು ತೋರಿದ್ದು, ಬದುಕುವ ಜೀವಗಳಿಗೆ ಗೊತ್ತಿರತ್ತೆ. ಅಲ್ಲೂ ಅಹಃ ಪ್ರದರ್ಶನ ಮಾಡುವ ಆತ್ಮಗಳಿಗೆ ಶಾಂತಿ ಸಿಗಲಿ ಎಂದಷ್ಟೇ ಬರೆಯಬಹುದಲ್ವೇ..!