ಮಹದಾಯಿಗಾಗಿ 600ಕಿಮೀ ಪಾದಯಾತ್ರೆಗೆ ನಿರ್ಧಾರ

ಬಳ್ಳಾರಿ: ಕಳಸಾ-ಬಂಡೂರಿ ನಾಲಾಗಳನ್ನ ಮಹದಾಯಿಗೆ ಜೋಡಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಯ ಮುಖಂಡರು ಬೆಳಗಾವಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ.
ಕರ್ನಾಟಕ ಪ್ರಜಾಶಕ್ತಿ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಕೆ.ಚಂದ್ರಶೇಖರ ಈ ನಿರ್ಧಾರ ಪ್ರಕಟಿಸಿದ್ದು, ಫೆಬ್ರುವರಿ 15ರಿಂದ ಬೆಳಗಾವಿಯಿಂದ ಸುಮಾರು 600 ಕಿಮೀ ದೂರವಿರುವ ಬೆಂಗಳೂರವರೆಗೆ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ.