Posts Slider

Karnataka Voice

Latest Kannada News

2ನೇ ಮದುವೆಯಾಗುತ್ತಿದ್ದ ಮಹಾಶಯನಿಗೆ ಮಂಟಪದಲ್ಲೇ “ಚಪ್ಪಲಿಯೇಟು” ಕೊಟ್ಟ ಪತ್ನಿ- ಪಾಲಕರಿಗೂ ಗೂಸಾ Exclusive Video

Spread the love

ಪತಿರಾಯನ ಜೊತೆಗಿದ್ದ ಪಾಲಕರಿಗೂ ಧರ್ಮದೇಟು ನೀಡಿದ ಬೀಗರು

ಎರಡನೇಯ ಮದುವೆಯಾಗಲಿದ್ದ ವಧುವಿನ ಸ್ಥಿತಿ ಅಯೋಮಯ

ಚಿತ್ರದುರ್ಗ: ಎರಡನೇ ಮದುವೆಗೆ ಹಸೆಮಣೆ ಏರಲು ಸಿದ್ಧವಾಗಿದ್ದ ಪತಿರಾಯನಿಗೆ ಮಂಟಪದಲ್ಲೇ ಮೊದಲ ಪತ್ನಿ ಚಪ್ಪಲಿ ಏಟು ಕೊಟ್ಟ ಘಟನೆ ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

Exclusive Video

ವರದಕ್ಷಿಣೆ ದುರಾಸೆಗೆ ಎರಡನೇ ಮದುವೆಯಾಗುತ್ತಿದ್ದವನಿಗೆ ಪತ್ನಿಯಿಂದಲೇ ಧರ್ಮದೇಟು ಬಿದ್ದಿದೆ. 4 ವರ್ಷದ ಹಿಂದೆ ತನುಜಾ ಎಂಬಾಕೆಯನ್ನ ಆರೋಪಿ ಕಾರ್ತಿಕ್ ಮದುವೆಯಾಗಿದ್ದ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ‌ ತನುಜಾ, ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆಯ ತಿಪ್ಪಘಟ್ಟದ ಕಾರ್ತಿಕ್ ನಾಯ್ಕ್​ನನ್ನು ಕೈಹಿಡಿದಿದ್ದಳು. ಆದರೂ ಕಾರ್ತಿಕ್ ಯಾರಿಗೂ ಗೊತ್ತಾಗದಂತೆ ಚಿತ್ರದುರ್ಗದಲ್ಲಿ 2ನೇ ಮದುವೆಗೆ ಪ್ಲಾನ್ ಮಾಡಿದ್ದ.

ಕಾರ್ತಿಕ್ ವರದಕ್ಷಿಣೆ ಆಸೆಗೆ ಮತ್ತೊಮ್ಮೆ‌ ಹಸಮಣೆ ಏರಲು ಸಿದ್ಧವಾಗಿದ್ದ. ಈ ಸುದ್ದಿ ತಿಳಿದು ಮೊದಲ ಪತ್ನಿ ಕುಟುಂಬಸ್ಥರೊಂದಿಗೆ ಮಂಟಪಕ್ಕೇ ಬಂದು ಧರ್ಮದೇಟು ಕೊಟ್ಟಿದ್ದಾಳೆ. ಆ ಮೂಲಕ ಕಾರ್ತಿಕ್​ ಪತ್ನಿ ತನುಜಾ ಕುಟುಂಬಸ್ಥರಿಂದ‌ ಎರಡನೇ ಮದುವೆಗೆ ಬ್ರೇಕ್ ಬಿದ್ದಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮದುವೆಗೆ ತಯಾರಾಗಿದ್ದ ವಧುವಿನ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.


Spread the love

Leave a Reply

Your email address will not be published. Required fields are marked *