ಪರಿಸ್ಥಿತಿ ಕೈ ಮಿರ್ತಿದೆ: ತಡೆಯೋಕೆ ಸಾಧ್ಯವಾಗ್ತಿಲ್ಲ: ಸಚಿವ ಮಾಧುಸ್ವಾಮಿ ಆತಂಕಕಾರಿ ಹೇಳಿಕೆ
1 min readತುಮಕೂರು: ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಎಂಟು ಜನ ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಅವರ ಜೀವದ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲವಾಗಿದೆ. ಕೊರೋನಾ ಕಮ್ಯೂನಿಟಿ ಸ್ಪ್ರೆಡ್ ಆಗೋ ಹಂತಕ್ಕೆ ತಲುಪುತ್ತಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.
ತುಮಕೂರಲ್ಲಿ ಕೊರೋನಾ ಹೆಚ್ಚಳದ ಹಿನ್ನೆಲೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ, ದುರ್ದೈವ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ವೇಗವಾಗಿ ಬೆಳಿತಿದೆ. ಜಿಲ್ಲಾಡಳಿತದಿಂದ ಎಷ್ಟೇ ಶ್ರಮಪಟ್ರೂ ನಿಗ್ರಹ ಮಾಡೋದು ಕಷ್ಟ, ಎಂಬ ಸ್ಥಿತಿಗೆ ನಾವು ತಲುಪ್ಪಿದ್ದೇವೆ ಎಂದು ಹೇಳಿದ್ರು.
ಸಂಖ್ಯೆಗಿಂತ ಕಮ್ಯುನಿಟಿ ಲೆವೆಲ್ ಗೆ ಹೋಗ್ತಾ ಇರೋದು ಆಘಾತ ತರ್ತಿದೆ. ಹೀಗಾಗ್ಬಾರ್ದು ಅಂತ ಹೋರಾಟ ಮಾಡ್ತಾ ಬಂದ್ವಿ, ಎಲ್ಲೋ ಒಂದ್ಕಡೆ ಪರಿಸ್ಥಿತಿ ನಮ್ಮ ಕೈ ಮೀರ್ತಿದೆ. ನಿನ್ನೆಯೂ ಒಬ್ಬರು ಸಾವನ್ನಪ್ಪಿದ್ದಾರೆ. ಅವರನ್ನ ಆಸ್ಪತ್ರೆಗೆ ತರೋ ವೇಳೆಯೇ ಕ್ರಿಟಿಕಲ್ ಆಗಿದ್ರು. ಉಸಿರಾಟ ಸಮಸ್ಯೆ ಆಗಿದ್ರಿಂದ ಸಾವನ್ನಪ್ಪಿದ್ರು. ಈ ಮೂಲಕ ಜಿಲ್ಲೆಯಲ್ಲಿ ಮತ್ತೊಂದು ಸಾವನ್ನ ದೃಢ ಪಡಿಸಿದ ಸಚಿವರು.
ಒಟ್ಟು ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಎಂಟು ಜನರ ಸ್ಥಿತಿ ಗಂಭೀರವಾಗಿದೆ. ಅವರ ಜೀವದ ಬಗ್ಗೆ ಯಾವುದೇ ಗ್ಯಾರಂಟಿ ಕೊಡೋಕಾಗಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.