ಮಾದಪ್ಪನ ದರ್ಶನ: ತೀರ್ಥ-ಮಹಾಮಂಗಳಾರತಿ ನಿರ್ಬಂಧ ತಮಿಳುನಾಡಿಗರಿಗಿಲ್ಲ ದರ್ಶನ

ಚಾಮರಾಜನಗರ: ಜೂನ 8 ರಿಂದ ಭಕ್ತರಿಗೆ ಮಾದಪ್ಪನ ದರ್ಶನವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಕೇಂದ್ರ ಸರ್ಕಾರ ಲಾಕ್ ಡೌನ್ ಅನ್ನು ಇನ್ನಷ್ಟು ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಹಲವು ಷರತ್ತುಗಳ ಮೇಲೆ ಮಾದಪ್ಪನ ದರ್ಶನ ಭಾಗ್ಯ ನೀಡಲಾಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಮಾದಪ್ಪ ದೇಗುಲ ಓಪನ್ ಆಗಲಿದೆ. ಪ್ರತಿ ದಿನ ಬೆಳಗ್ಗೆ 7 ರಿಂದ ಸಂಜೆ 7 ರ ವರೆಗೆ ಮಾತ್ರ ಮಾದಪ್ಪನ ದರ್ಶನವಾಗಲಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೇವಸ್ಥಾನದ ಸಿಬ್ಬಂದಿ ಮತ್ತು ಭಕ್ತರು ಅಂತರವನ್ನು ಕಾಪಾಡಿಕೊಳ್ಳಬೇಕು. ತಮಿಳುನಾಡಿನ ಭಕ್ತರಿಗೆ ತಾತ್ಕಾಲಿಕ ನಿರ್ಬಂಧ. ಸದ್ಯದ ಮಟ್ಟಿಗೆ ಚಿನ್ನ ಹಾಗೂ ಬೆಳ್ಳಿ ರಥಗಳ ಉತ್ಸವವನ್ನು ನಿರ್ಬಂಧಿಸಲಾಗಿದೆ. ದೇವಸ್ಥಾನದಲ್ಲಿ ಲಾಡು ಮತ್ತು ಪ್ರಸಾದ ವಿತರಣೆಗೆ ಮಾತ್ರ ಅವಕಾಶವಿದ್ದು, ತೀರ್ಥ, ಮಹಾ ಮಂಗಳಾರತಿ ಮತ್ತು ಪಂಚಾಮೃತ ನಿರ್ಬಂಧ. ದಾಸೋಹ ಭವನದಲ್ಲಿ ತಾತ್ಕಾಲಿಕವಾಗಿ ಊಟದ ವ್ಯವಸ್ಥೆ ಬಂದ್. ಗರ್ಭಿಣಿಯರು. ಮಕ್ಕಳು. ಮತ್ತು ವೃದ್ಧರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ ಎಂದು ಚಾಮರಾಜನಗರ ದಲ್ಲಿ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.