ಗ್ಯಾಸ್ ಶಾಕ್; ತುಪ್ಪ ಕಾಸ್ಟ್ಲಿ: ಬಸ್ ದರ ಹೆಚ್ಚಳ: ಜನತೆಗೆ ಬರೆ ಮೇಲೆ ಬರೆ ಕೊಡಲಿರುವ ಸರಕಾರ

ನವದೆಹಲಿ: ಇಂಧನ ಬೆಲೆಯು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಾದ ಪರಿಣಾಮ ಅಡುಗೆ ಅನಿಲ ದರ ಇಂದಿನಿಂದಲೇ 144ರೂಗಳಷ್ಟು ಹೆಚ್ಚಿಗೆ ಮಾಡಲಾಗಿದೆ. ಇದರಿಂದ ಮೊದಲೇ ಬೆಲೆ ಏರಿಕೆಯ ಬಿಸಿಯಲ್ಲಿದ್ದ ಜನರಿಗೆ ಎಲ್ಪಿಜಿ ಮತ್ತಷ್ಟು ಶಾಕ್ ನೀಡಿದೆ.
ಕಳೆದ 40ದಿನಗಳ ಹಿಂದಷ್ಟೇ ಅಡುಗೆ ಅನಿಲ ದರವನ್ನ ಹೆಚ್ಚು ಮಾಡಲಾಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ. ಇದರ ಬೆನ್ನಲ್ಲೇ ನಂದಿನಿ ತುಪ್ಪದ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ಸರಕಾರ ಕೆಜಿ 20ರೂಪಾಯಿ ಏರಿಕೆ ಮಾಡುವಂತೆ ಸೂಚನೆ ನೀಡಿದ್ದರೂ, ಕೆಎಂಎಫ್ 200ಗ್ರಾಂ 20ರೂಪಾಯಿ ಹೆಚ್ಚು ಮಾಡಿದ್ದು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.
ಕೇಂದ್ರ ಮತ್ತು ರಾಜ್ಯ ಸರಕಾರ ಬೆಲೆ ಏರಿಕೆ ಮಾಡುವುದರಲ್ಲಿ ಸ್ಪರ್ಧೆಗೆ ಬಿದ್ದವರಂತೆ ನಡೆದುಕೊಳ್ಳುತ್ತಿದ್ದಾರೆ. ಈಗ ಸಾರಿಗೆ ಇಲಾಖೆಯು ಕೂಡಾ ಬಸ್ ಪ್ರಯಾಣ ದರವನ್ನ ಶೇಕಡಾ 15ರಷ್ಟು ಏರಿಸಲು ತೀರ್ಮಾನಿಸಿದೆ. ಇದು ಕೂಡಾ ಜಾರಿಗೆ ಬಂದರೇ ಬಡ ಮದ್ಯಮ ವರ್ಗದ ಜನರಿಗೆ ತೀವ್ರ ಸಂಕಷ್ಟ ಎದುರಾಗಲಿದೆ.