2016ರಲ್ಲಿ ಆರೀಫ ಭದ್ರಾಪುರ ಕೊಲೆ ಯತ್ನದ ಆರೋಪಿಯನ್ನ ಮತ್ತೆ ಬಂಧಿಸಿದ ಹುಬ್ಬಳ್ಳಿ ಪೊಲೀಸರು…!!!

ಪಾಲಿಕೆ ಸದಸ್ಯನ ಕೊಲೆಗೆ ಯತ್ನ; ಆರೋಪಿ ಜೈಲಿಗೆ
ಹುಬ್ಬಳ್ಳಿ: ಹಾಲಿ ಪಾಲಿಕೆ ಸದಸ್ಯನ ಕೊಲೆಗೆ ಯತ್ನಿಸಿ ಎಂಟು ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
2016ರಲ್ಲಿ ಈಗಿರುವ ಪಾಲಿಕೆ ಸದಸ್ಯ ಆರೀಫ್ ಭದ್ರಾಪುರ ಕೊಲೆಗೆ ಯತ್ನಿಸಿದ್ದ ಆರೋಪದಡಿಯಲ್ಲಿ ಸೈಪ್ ಅಲಿ ಜೈಲುಪಾಲಾಗಿದ್ದ. ತದನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಸೈಫ್ ಅಲಿ ಕೋರ್ಟ್‌ಗೂ ಹಾಜರಾಗದೆ ಎಂಟು ವರ್ಷದಿಂದ ಅಂತರರಾಜ್ಯದಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ.
ಖಚಿತ ಮಾಹಿತಿಯ ಮೇರೆಗೆ ಆರೋಪಿ ಇರುವ ಮಾಹಿತಿ ಲಭ್ಯವಾದ ತಕ್ಷಣ ಶಹರ ಠಾಣೆಯ ಪೊಲೀಸರು ಆರೋಪಿಯನ್ನು ಇದೀಗ ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.