ಲವ್ ಯೂ ಮುದ್ದು ಎಂದ ಸಿದ್ದು… ಪ್ರೇಮಕಥೆ ಹಿಂದೆ ಬಿದ್ದ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಾರಥಿ ಕುಮಾರ್…

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕ ಕುಮಾರ್ ಈಗ ಹೊಸ ಸಿನಿಮಾ ಘೋಷಿಸಿದ್ದಾರೆ. ಕುಮಾರ್ ಅವರ ಹೊಸ ಪ್ರಯತ್ನಕ್ಕೆ ‘ಲವ್ ಯೂ ಮುದ್ದು’ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಟೈಟಲ್ ಹೇಳುವಂತೆ ಇದೊಂದು ಪ್ರೇಮಕಥೆ. ಮಹಾರಾಷ್ಟ್ರದಲ್ಲಿ ನಡೆದ ನೈಜ ಪ್ರೇಮಕಥೆಯನ್ನು ಕುಮಾರ್ ಅವರು ಸಿನಿಮಾ ರೂಪಕ್ಕಿಳಿಸಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.
‘ಲವ್ ಯೂ ಮುದ್ದು’ ಸಿನಿಮಾದಲ್ಲಿ ನಾಯಕನಾಗಿ ಸಿದ್ದು ನಟಿಸುತ್ತಿದ್ದು, ನವನಟಿ ರೇಷ್ಮಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ರಾಜೇಶ್ ನಟರಂಗ, ಗಿರೀಶ್ ಶಿವಣ್ಣ, ತಬಲಾ ನಾಣಿ, ಶ್ರೀವತ್ಸ, ಅಪೂರ್ವ ಹಾಗೂ ಉಷಾ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಕಾರ್ಕಳ, ಕುಮಟಾ, ಬೆಂಗಳೂರು ಸುತ್ತಮುತ್ತ 45 ದಿನಗಳ ಶೂಟಿಂಗ್ ನಡೆಸಲಾಗಿದೆ. ಕಿಶನ್ ಎಂಟರ್ ಟೈನ್ಮೆಂಟ್ ಬ್ಯಾನರ್ ನಡಿ ಕಿಶನ್ ಟಿಎನ್ ಲವ್ ಯೂ ಮುದ್ದು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ TS ಸಾಥ್ ಕೊಟ್ಟಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತ ನಿರ್ದೇಶನ ಹಾಗೂ ಸಿಎಸ್ ದೀಪು ಸಂಕಲನ ಚಿತ್ರಕ್ಕಿದೆ.