ಕರಾವಳಿ ಭಾಗದ ಪ್ರೇಮಕಥೆ ‘ಮಾರ್ನಮಿ’… ರಗಡ್ ಲುಕ್‌ನಲ್ಲಿ ರಿತ್ವಿಕ್ ಮಠದ್…!

‘ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಧಾರಾವಾಹಿಗಳ ಮೂಲಕ ಫೇಮಸ್ ಆಗಿರುವ ನಟ ರಿತ್ವಿಕ್ ಮಠದ್, ರಗಡ್ ಅವತಾರವೆತ್ತಿದ್ದಾರೆ. ಗಿಫ್ಟ್ ಬಾಕ್ಸ್ ಚಿತ್ರದ ನಂತರ ತುಂಬಾ ಸಮಯ ತೆಗೆದುಕೊಂಡು ಕಿರುತೆರೆಯಿಂದ ಈಗ ರಿತ್ವಿಕ್ ಬೆಳ್ಳಿತೆರೆಗೆ ಒಂದೊಳ್ಳೆ ಕಥೆ ಹಾಗೂ ತಂಡ ಕಟ್ಟಿಕೊಂಡು ಎಂಟ್ರಿ ಕೊಟ್ಟಿದ್ದಾರೆ, ಅವರು ನಟಿಸುತ್ತಿರುವ ಚಿತ್ರ ಮಾರ್ನಮಿಯ ಟೀಸರ್ ರಿಲೀಸ್ ಆಗಿದೆ. ಗುಣಾದ್ಯಾ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿರುವ ಟೀಸರ್ ಕ್ಯೂರಿಯಾಸಿಟಿ ಹೆಚ್ಚಿಸಿದ್ದು, ಕಥೆಯ ಗುಟ್ಟನ್ನ ನಿರ್ದೇಶಕರರು ಬಿಟ್ಟುಕೊಟ್ಟಿಲ್ಲ. ಚರಣ್ ರಾಜ್ ಹಿನ್ನೆಲೆ ಸಂಗೀತ ಟೀಸರ್ ಹೈಲೆಟ್ಸ್.
ನಿರ್ಮಾಪಕ ನಿಶಾಂತ್ ಮಾತನಾಡಿ, ‘ಎಲ್ಲರೂ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಶೀಘ್ರದಲ್ಲೇ ಟ್ರೇಲರ್ ಬರಲಿದೆ. ಒಳ್ಳೆ ಸ್ಟಾರ್ ಕಾಸ್ಟ್ ಜೊತೆ ಅದ್ಭುತ ಟೆಕ್ನಿಷಿಯನ್ ಟೀಂ ಸಿಕ್ಕಿದೆ. ನನಗೆ ನನ್ನ ಪತ್ನಿ ಸಾಥ್ ಕೊಟ್ಟರು. ಹೀಗೆ ಜರ್ನಿ ಶುರುವಾಯ್ತು. ಶೂಟಿಂಗ್ ಕಂಪ್ಲೀಟ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಮ್ಯೂಸಿಕ್ ವರ್ಕ್ ನಡೆಯುತ್ತಿದೆ. ಸೆಪ್ಟಂಬರ್ ನಲ್ಲಿ ಸಿನಿಮಾ ತೆರೆಗೆ ತರುವ ಆಲೋಚನೆಯಲ್ಲಿ ಇದ್ದೇನೆ’ ಎನ್ನುತ್ತಾರೆ.
ನಿರ್ದೇಶಕ ರಿಶಿತ್ ಶೆಟ್ಟಿ, ‘ಮಾರ್ನಮಿಯ ಮೊದಲೆರಡು ಟೀಸರ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈಗ ರಿಲೀಸ್ ಆಗಿರುವ ಟೀಸರ್ ಗೂ ಅದೇ ರೀತಿ ಸಪೋರ್ಟ್ ಇರಲಿ. ಎಲ್ಲರೂ ಸಿನಿಮಾ ಇಷ್ಟಪಡುತ್ತಾರೆ ಎಂದುಕೊಂಡಿದ್ದೇನೆ. ನನ್ನ ಸ್ನೇಹಿತ ಸುಧಿ ಬರೆದ ಕಥೆ ಇದು. ಆ ಕಥೆ ರಿತ್ವಿಕ್ ಗೆ ಹೇಳಿದೆ ಅಲ್ಲಿಂದ ಜರ್ನಿ ಶುರುವಾಯ್ತು. ನಿಶಾಂತ್ ಸರ್ ಸಿಕ್ಕಿದರು. ಈಗ ಇದು ಇಲ್ಲಿಗೆ ಬಂದು ನಿಂತಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.
ನಾಯಕ ರಿತ್ವಿಕ್ ಮಠದ್, ‘ಇವತ್ತು ಈ ಜರ್ನಿ ನೋಡಿದಾಗ ಹೆಮ್ಮೆ ಅನಿಸುತ್ತದೆ. ಈ ಪಯಣವನ್ನು ಇಷ್ಟು ಅದ್ಭುತವಾಗಿ ಮುಗಿಸುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಇದು ಸಾಧ್ಯವಾಗಿದ್ದು ನಿಶಾಂತ್ ಸರ್ ಹಾಗೂ ಶಿಲ್ಪಾ ಮೇಡಂ ಇಂದ. ಈ ರೀತಿಯ ನಿರ್ಮಾಪಕರು ಇಂಡಸ್ಟ್ರೀಗೆ ಹಾಗೂ ಹೊಸಬರಿಗೆ ಬೇಕು. ಹೊಸಬರಿಗೆ ದೊಡ್ಡು ಹಾಕಿ ಅದ್ಭುತ ಪ್ರೊಡಕ್ಟ್ ತೆಗೆಯುವುದು ಸುಲಭವಲ್ಲ. ನನಗೆ ಸಿಕ್ಕಿರುವ ಅದ್ಭುತವಾದ ಬರ್ತಡೇ ಗಿಫ್ಟ್. ನಿರ್ದೇಶಕ ಶೆಟ್ರು ನನಗೆ ತಮ್ಮನ ರೀತಿ, ಅವರು ನಿರ್ದೇಶಕರಾಗಿರುವುದು ಹಾಗೂ ಅದರಲ್ಲಿ ನಾನು ನಟಿಸುತ್ತಿರುವುದು ತುಂಬಾ ಖುಷಿಯ ವಿಷಯ’ ಎನ್ನುತ್ತಾರೆ.
ಕೆಲ ಸಿನಿಮಾಗಳಲ್ಲಿ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ರಿಶಿತ್ ಶೆಟ್ಟಿ ಈ ಚಿತ್ರಕ್ಕೆ ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ. ‘ಮಾರ್ನಮಿ’ ಚಿತ್ರದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ಜೊತೆಗೆ ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ಸೇರಿದಂತೆ ಮುಂತಾದವರು ನಟಿಸಿದ್ದಾರೆ ಸಲಗ, ಭೀಮ ಖ್ಯಾತಿಯ ಶಿವಸೇನ ಛಾಯಾಗ್ರಹಣ ನಿರ್ವಹಿಸಿದ್ದಾರೆ, ಚರಣ್ ರಾಜ್ ಸಂಗೀತ ಸಂಯೋಜನೆ ಚಿತ್ರದಲ್ಲಿದೆ, ವರ್ಷಾ ಆಚಾರ್ ಕಾಸ್ಟುಮ್ ಡಿಸೈನ್ ಮಾಡಿದ್ದಾರೆ, ‘ಮಾರ್ನಮಿ’ ಸಿನಿಮಾವನ್ನು ಗುನಾಧ್ಯ ಬ್ಯಾನರ್ ಅಡಿಯಲ್ಲಿ ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ.