ಇನ್ನೊಂದು ಜನ್ಮವಿದ್ದರೇ ನಿನ್ನ ಋಣ ತೀರಿಸ್ತೇನಿ ಅಮ್ಮಾ: ಹೀಗೆಂದ ಜೋಡಿಗಳು ಆದವೇನು..
ಯಾದಗಿರಿ: ಅಮ್ಮಾ ಇನ್ನೊಂದು ಜನ್ಮವಿದ್ದರೇ ನಿನ್ನ ಋಣ ತೀರಿಸ್ತೇನಿ ಅಮ್ಮಾ, ನನ್ನ ಕ್ಷಮಿಸಿ.. ಅಣ್ಣಾ ನಿನ್ನ ಮಿಸ್ ಮಾಡಕೋತ್ತಿದ್ದೇನಿ ಎನ್ನುತ್ತಿದ್ದ ಆ ಯುವಕ ಆಕೆಯನ್ನ ತೋಳಬಂಧನದಲ್ಲಿಟ್ಟುಕೊಂಡಿದ್ದ. ಇಂತಹದೊಂದು ವೀಡಿಯೋ ಬಹಳ ಹೊತ್ತು ಆಗಿರಲಿಲ್ಲ.. ಅನಿಸತ್ತೆ.. ಅಷ್ಟರಲ್ಲಿ..
ಸೆಲ್ಪಿ ವೀಡಿಯೋ..
ಇವರಿಬ್ಬರ ಹೆಸರು ಹನಮಂತಪ್ಪ ಮತ್ತು ಮಹಾದೇವಿ. ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮಹದೇವಿಗೆ ಮನೆಯವರು ಅದಾಗಲೇ ಹಲವು ಬಾರಿ ಎಚ್ಚರಿಕೆ ನೀಡಿ, ಹನಮಂತಪ್ಪನ ಜೊತೆ ಸಲುಗೆಯಿಂದ ಇರಬೇಡಾ ಎಂದಿದ್ರು. ಅದೇ ಇಬ್ಬರಿಗೂ ಕಂಟಕವಾಗಿದೆ.
ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗೊಂದಡಗಿ ಗ್ರಾಮದ ಹೊರ ವಲಯದಲ್ಲಿರುವ ಕಲ್ಯಾಣಿಗೆ ಬಿದ್ದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಇಬ್ಬರ ಮೃತದೇಹಗಳು ತೇಲುತ್ತಿದ್ದಾಗ ಆತ್ಮಹತ್ಯೆ ವಿಚಾರ ಬಹಿರಂಗೊಂಡಿದೆ.
ಪೋಷಕರ ವಿರೋಧದ ಹಿನ್ನೆಲೆ ಸೆಪ್ಟೆಂಬರ್ 8 ಮನೆ ಬಿಟ್ಟಿದ್ದ ಜೋಡಿಗಳು ಹೀಗೆ ಸಾವಿಗೀಡಾಗಿದ್ದು, ಗ್ರಾಮದಲ್ಲಿ ನೀರವಮೌನ ಆವರಿಸಿದೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.