ಕುರುಬರ ಯುವತಿ- ಮಾದರ ಯುವಕ ಲವ್ ಸ್ಟೋರಿ: ನವಲಗುಂದದಲ್ಲಿ ವಿಷ ಸೇವಿನೆ- ಹುಡುಗಿ ಸಾವು, ಹುಡುಗ ಬದುಕೋದು ಡೌಟು…!

ನವಲಗುಂದ: ಇಡೀ ರಾಜ್ಯದಲ್ಲಿ ಜಾತಿಯತೇಯ ಕೂಗು ಅಲ್ಲಲ್ಲಿ ಕೇಳಿ ಬರುತ್ತಿರುವ ಇಂತಹ ಸಮಯದಲ್ಲಿ ಅನ್ಯ ಜಾತಿಯ ಹುಡುಗನನ್ನ ಪ್ರೀತಿಸಿದ್ದ ಹುಡುಗಿಯೋರ್ವಳು ತನ್ನ ಮದುವೆಯನ್ನ ಬೇರೆಯವರ ಜೊತೆ ಮಾಡುತ್ತಾರೆಂಬ ಕಾರಣಕ್ಕೆ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ನವಲಗುಂದ ಪಟ್ಟಣದಲ್ಲಿ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವಿಗೀಡಾಗಿದ್ದು, ಯುವಕನ ಸ್ಥಿತಿಯೂ ಗಂಭೀರವಾಗಿದೆ.

ಮೂಲತಃ ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಸಾವಿತ್ರಿ ಮುತ್ತಪ್ಪ ನರಗುಂದ ಹಾಗೂ ಮಲ್ಲಪ್ಪ ದುರ್ಗಪ್ಪ ಮಾದರ ವಿಷ ಸೇವಿಸಿದ್ದ ಪ್ರೇಮಿಗಳು. ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಕಿಮ್ಸಗೆ ರವಾನೆ ಮಾಡಲಾಗಿತ್ತು.
ಕಿಮ್ಸನಲ್ಲಿ ಚಿಕಿತ್ಸೆ ಫಲಕಾರಿಯಾಗದೇ 20 ವಯಸ್ಸಿನ ಸಾವಿತ್ರಿ ಸಾವಿಗೀಡಾಗಿದ್ದು, ಮಲ್ಲಪ್ಪನ ಸ್ಥಿತಿಯೂ ಗಂಭೀರವಾಗಿದೆ.
ಕೆಲವು ದಿನಗಳ ಹಿಂದೆ ಸಾವಿತ್ರಿಗೆ ಬೇರೆ ಯುವಕನ ಜೊತೆ ಮದುವೆ ಒಪ್ಪಂದ ಮಾಡಿದ್ದರು. ಇದನ್ನ ಒಪ್ಪಿಕೊಳ್ಳದೇ ಪ್ರೇಮಿಗಳು ಪ್ರಾಣತ್ಯಾಗ ಮಾಡಲು ನಿರ್ಧರಿಸಿ, ಇಂತಹ ತೀರ್ಮಾನ ಮಾಡಿದ್ದಾರೆಂದು ಹೇಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.