ಹುಡುಗಿ ಮನೆ ಮುಂದೆ “ಬ್ಲಾಸ್ಟ್ ಮಾಡಿಕೊಂಡು” ಭೀಕರವಾಗಿ ಪ್ರಾಣಬಿಟ್ಟ “ಹುಚ್ಚು ಪ್ರೇಮಿ”….!!!
1 min readಪ್ರೀತಿಯ ಮನೆ ಮುಂದೆ ಬ್ಲಾಸ್ಟ್ ಆದ ಪ್ರಿಯಕರ
ಆಕೆಯ ಮುಂದೆ ಶವವಾದ ಯುವಕ
ಮಂಡ್ಯ: ಯುವತಿ ಮನೆ ಮುಂದೆ ಭಗ್ನ ಪ್ರೇಮಿಯೋರ್ವ ಬಂಡೆ ಸಿಡಿಸಲು ಬಳಸುವ ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಗೊಳ್ಳುವ ಮೂಲಕ ಭೀಕರವಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದ ನಾಗಮಂಗಲ ತಾಲೂಕಿನ ಬಸವೇಶ್ವರ ನಗರದಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಭಗ್ನ ಪ್ರೇಮಿ ಯುವಕನ ದೇಹ ಛಿದ್ರ ಛಿದ್ರವಾಗಿದ್ದು, ಅಪ್ರಾಪ್ತ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಭೀಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ವರ್ಷ ಅಪ್ರಾಪ್ತ ಯುವತಿಯ ಜೊತೆಗೂಡಿ ಎಸ್ಕೇಪ್ ಆಗಿದ್ದ ಯುವಕನನ್ನ ಪೊಲೀಸರು ಬಂಧಿಸಿ ಪೋಸ್ಕೋ ಪ್ರಕರಣ ದಾಖಲು ಮಾಡಿದ್ದರು.
ಪ್ರಕರಣದಿದ ಜೈಲು ಪಾಲಾಗಿ ಮನ ನೊಂದಿದ್ದ ಯುವಕ ಜೈಲಿಂದ ಜಾಮೀನಿನ ಮೇಲೆ ಹೊರ ಬಂದು ಯುವತಿ ಮನೆ ಮುಂದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.