ಈತ ಪ್ರೀತ್ಸೆ ಅಂದಾ.. ಆಕೆ ಒಲ್ಲೆ ಅಂದ್ಲು.. ಈತ ವಿಷ ಕುಡಿದು ಕಿಮ್ಸ ಸೇರಿದ

ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಹುಡುಗಿ ಕೈಕೊಟ್ಟಳು ಎಂದುಕೊಂಡು ತಾನೂ ಬದುಕಬಾರದೆಂದುಕೊಂಡ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ 20 ವರ್ಷದ ಯುವಕ ನಾಗರಾಜ ಎಂಬಾತ ಇಂದು ಸಂಜೆ 6 ಗಂಟೆ ಸಮಯದಲ್ಲಿ ಬೆಳೆಗಳಿಗೆ ಸಿಂಪಡಿಸಲು ಮನೆಯಲ್ಲಿ ತಂದಿಟ್ಟಿದ್ದ ಕ್ರಿಮಿನಾಶಕ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡ ಯುವಕನನ್ನ ಹುಬ್ಬಳ್ಳಿಯ ಕಿಮ್ಸಗೆ ತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಾಗರಾಜ ಕಳೆದ ಒಂದು ವರ್ಷದಿಂದ ತನ್ನದೇ ಗ್ರಾಮದ ಯುವತಿಯನ್ನ ಪ್ರೀತಿಸುತ್ತಿದ್ದ. ಆಗಾಗ ಶಹರಕ್ಕೆ ಬಂದು ಭೇಟಿಯಾಗುತ್ತಿದ್ದರು. ಆದರೆ, ಇತ್ತೀಚೆಗೆ ಈತನ ಜೊತೆ ಮಾತುಕತೆ ಮಾಡಲು, ಯುವತಿ ಹಿಂದೇಟು ಹಾಕತೊಡಗಿದ್ದಳು. ಇದರಿಂದ ರೋಸಿ ಹೋದ ನಾಗರಾಜ, ಆಕೆಯನ್ನ ನೇರವಾಗಿ ಕೇಳಿದಾಗ, ಈತನ ಪ್ರೀತಿಯನ್ನ ನಿರಾಕರಿಸಿದ್ದಾಳೆ.
ಇದೇ ಕಾರಣದಿಂದ ಮನನೊಂದು ನಾಗರಾಜ ಸೇವಿಸಿ, ಸಾವಿಗೆ ಶರಣಾಗಲು ಯತ್ನಿಸಿದ್ದಾನೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.