18ತುಂಬುವ ತನಕ ಪ್ರೀತಿಸಿದ- ತುಂಬಿದ ತಕ್ಷಣ ಮದುವೆಯಾಗೆಂದ- ಆಕೆ ಒಲ್ಲೆ ಅಂದಳು.. ಅಷ್ಟೇ.. ಅದನ್ನ ಮಾಡಿ, ಪೊಲೀಸರಿಗೆ ಶರಣಾದ..!

ಮೈಸೂರು: ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಹದಿನೆಂಟು ತುಂಬಿ 19ಕ್ಕೆ ಕಾಲಿಟ್ಟ ದಿನವೇ ಮದುವೆಯಾಗೋಣವೆಂದು ಕೇಳಿದ. ಆಕೆ.. ಈಗ ಆಗಲ್ಲ ಅಂದಳು. ಈತ ಆಕೆಗೆ ಚೂರಿ ಇರಿದು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿ, ಈತ ಸಂಜೆ ಹೋಗಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಇಂತಹ ಘಟನೆ ನಡೆದಿದ್ದು ಮೈಸೂರಿನ ಕೆ.ಆರ್ ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ.
ಮನೆ ಮುಂದೆ ನಿಂತಿದ್ದ ಅಶ್ವಿನಿ (ಹೆಸರು ಬದಲಾಯಿಸಲಾಗಿದೆ) ಯುವತಿಗೆ ಚಾಕು ಇರಿದ ಗಗನ ಅಲಿಯಾಸ್ ಕೆಂಚ ಎಂಬ ಯುವಕ ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆಕೆಯನ್ನ ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದ ಗಗನ, ಆಸ್ಪತ್ರೆಯಲ್ಲಿ ಆಕೆಯ ಆರೋಗ್ಯ ಸುಧಾರಣೆಯಾಗುತ್ತಿದೆ ಎಂದು ಮಾಹಿತಿ ತಿಳಿದು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದ ಆಕೆ ಮದುವೆಯಾಗಲು ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲ, ನೀವು ಡ್ರೈವರ್ ಇದ್ದೀಯಾ ಎಂದು ಹೀಯಾಳಿಸಿದ್ದಾಳೆಂದು ಚೂರಿ ಇರಿದೆ ಎಂದು ಠಾಣೆಯಲ್ಲಿ ಹೇಳಿದ್ದಾಗಿ ತಿಳಿದು ಬಂದಿದೆ.
ಗಗನಗೆ ಯುವತಿಯ ಪಾಲಕರು ಕೂಡಾ ಬೆದರಿಕೆ ಹಾಕಿದ್ದರು ಎಂಬುದನ್ನ ವಿಚಾರಣೆ ವೇಳೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆಂದು ಗೊತ್ತಾಗಿದೆ.