ಅವಳಿಗಾಗಿ ನೇಣೇರಿ ಗೆಳೆಯರಿಗೆ ವಾಟ್ಸಾಫ್ ಮಾಡಿದಾ: ಆಪ್ತಮಿತ್ರರಿಂದ ಬಚಾವ್- ಹುಬ್ಬಳ್ಳಿಯಲ್ಲೊಂದು ಏಕ್ ದೂಜೇ ಕೇಲಿಯೇ ಪ್ರೇಮ ಕಹಾನಿ

ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನ ಅವರ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಬೇಕೆಂದು ಕಾದು ಕುಳಿತಿದ್ದ ಯುವಕನಿಗೆ, ನಾವೂ ಹುಡುಗಿ ಕೊಡಲ್ಲ ಎಂದಿದ್ದೇ ತಡ, ಯುವಕನೋರ್ವ ನೇಣಿಗೆ ಶರಣಾಗಲು ಯತ್ನಿಸಿ, ಗೆಳೆಯರಿಂದ ಬಚಾವ್ ಆದ ಘಟನೆ ಹಳೇಹುಬ್ಬಳ್ಳಿಯಲ್ಲಿ ನಡೆದಿದೆ.
ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಯುವಕನ ಹೆಸರು ಮಲೀಕ್ ಬೇಪಾರಿ ಎಂದು ಗುರುತಿಸಲಾಗಿದ್ದು, ತೀವ್ರ ತೊಂದರೆ ಅನುಭವಿಸುತ್ತಿದ್ದು, ಕಿಮ್ಸಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯನ್ನ ಮದುವೆಯಾಗಬೇಕೆಂದುಕೊಂಡಿದ್ದ ಮಲೀಕ್, ಅವರ ಮನೆಯವರ ಒಪ್ಪಿಗೆ ಸಿಗುತ್ತದೆ ಎಂದುಕೊಂಡಿದ್ದ. ಆದರೆ, ಮಲೀಕನೊಂದಿಗೆ ಮದುವೆ ಮಾಡಿಕೊಡಲು ಯುವತಿಯ ಮನೆಯವರ ನಿರಾಕರಿಸಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನೇಣಗೆ ಕೊರಳೋಡ್ಡಡುತ್ತಲೇ, ಗೆಳೆಯರಿಗೆ ವಾಟ್ಸಾಫ್ ಮಾಡಿ, ಮೈ ಮರ್ತಾ ಹೂಂ ( ನಾನು ಸಾಯುತ್ತೇನೆ) ಎಂದು ಸಂದೇಶ ಕಳಿಸಿದ್ದ.
ತಕ್ಷಣವೇ ಓಡಿ ಬಂದು ನೋಡಿದಾಗ, ಮಲೀಕ ನೇಣಿನಲ್ಲಿ ಉಸಿರಾಟದ ತೊಂದರೆಯಿಂದ ನರಳುತ್ತಿದ್ದ. ತಕ್ಷಣವೇ ಆತನನ್ನ ಎಲ್ಲರೂ ಕೂಡಿಕೊಂಡು ಕಿಮ್ಸಗೆ ರವಾನೆ ಮಾಡಿದ್ದು, ಜೀವನ್ಮರಣದ ನಡುವೆ ಯುವಕ ಹೋರಾಟ ಮಾಡುತ್ತಿದ್ದಾನೆ.