ರಂಭೆ-ಊರ್ವಶಿ ಎಂದು ಸುತ್ತಾಡಿದ-ಹುಡುಗಿ ಗರ್ಭವತಿಯಾದ ನಂತರ ಓಡಿ ಹೋದ
ಹೊಸಕೋಟೆ: ಯುವಕನೋರ್ವ ನಾಲ್ಕು ವರ್ಷಗಳ ಕಾಲ ಯುವತಿಯೊಬ್ಬಳನ್ನ ಪ್ರೀತಿಸಿ ವಂಚಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಯಳಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೆಂಕಟೇಶ್ ಎಂಬಾತ ಇದೇ ಊರಿನ ಯುವತಿಯೊಬ್ಬಳ ಪರಿಚಯ ಮಾಡಿಕೊಂಡು ಬಳಿಕ ಮದುವೆಯಾಗುತ್ತೇನೆಂದು ನಂಬಿಸಿ ಪಾರ್ಕ್, ದೇವಸ್ಥಾನ, ಸಿನಿಮಾ, ಹೋಟೆಲ್, ಲಾಡ್ಜ್ ಅಂತೆಲ್ಲಾ ಸುತ್ತಾಡಿಸಿ ಆಕೆಯನ್ನ ಗರ್ಭೀಣಿ ಮಾಡಿದ್ದಾನೆ. ಇನ್ನು ಆಕೆ ಗರ್ಭೀಣಿ ಎಂಬ ವಿಚಾರ ತಿಳಿಯುತ್ತಿದ್ದಂತೆ ತನ್ನ ಮನೆಯವರ ಸಹಾಯ ಪಡೆದು ತನ್ನ ಪ್ರೇಯಿಸಿಗೆ ಗರ್ಭಪಾತ ಮಾಡಿಸಿದ್ದಾನೆ. ಇಷ್ಟೇಲ್ಲಾ ಕೀಟಲೆ ಮಾಡಿರುವ ವೆಂಕಟೇಶ್ ಯುವತಿಯನ್ನ ಮದುವೆಯಾಗಲು ನಿರಾಕರಿಸುತ್ತಿದ್ದು, ನ್ಯಾಯ ಕೊಡಿಸುವಂತೆ ಆ ಯುವತಿ ಹೊಸಕೋಟೆ ಪೊಲೀಸ್ ಠಾಣೆ ಎದುರು ಕೆಲ ಸಂಘಟನೆಗಳ ಮುಖಾಂತರ ಪ್ರತಿಭಟನೆ ನಡೆಸಿದ್ದಾಳೆ. ಪ್ರೀತಿಯ ವಿಚಾರಕ್ಕೆ ಸಂಬoಧಪಟ್ಟoತೆ ಗ್ರಾಮದಲ್ಲಿ ನ್ಯಾಯ ಪಂಚಾಯ್ತಿಯೂ ಮಾಡಲಾಗಿತ್ತಂತೆ. ಆದ್ರೆ ವೆಂಕಟೇಶ ನ್ಯಾಯ ಪಂಚಾಯ್ತಿಗೂ ಬಗ್ಗದೆ ಇದ್ದಿದ್ರಿಂದ ಯುವತಿ ಪ್ರಿಯಕರ, ಆತನ ಅಕ್ಕ ಶೋಭ ಸೇರಿದಂತೆ ಗರ್ಭಪಾತ ಮಾಡಿಸಲು ಒತ್ತಡ ಹೇರಿದ್ದ ಮೂವರ ಮೇಲೆ ಅತ್ಯಾಚಾರ ಸೇರಿದಂತೆ ವಂಚನೆ ಪ್ರಕರಣವನ್ನ ದಾಖಲಿಸಿದ್ದಾಳೆ. ಆದ್ರೆ ವೆಂಕಟೇಶನನ್ನ ಹೊರತು ಪಡಿಸಿ ಇನ್ನುಳಿದ ಆರೋಪಿಗಳ ಮೇಲೆ ಪೊಲೀಸರು ಯಾವುದೇ ಕ್ರಮವನ್ನ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಸಹಾಯದೊಂದಿಗೆ ಹೊಸಕೋಟೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆಯನ್ನ ನಡೆಸಿದ್ದಾಳೆ. ಇನ್ನೂ ನೀನೇ ರಂಭೆ, ನೀನೇ ಊರ್ವಶಿ ಅಂದುಕೊಂಡು ಮಂಕು ಬೂದಿ ಎರಚಿದ್ದ ಪ್ರೀತಿ ವಂಚಕ ಜೈಲು ಸೇರಿದ್ದಾನೆ.