ಧಾರವಾಡ: “ಹೋಮ” ಲೋಟಸ್ ಲಿಕ್ಕರ್‌ಗೆ ದಿಲ್ಲಿ ಆರ್ಡರ್- ನಾರಿಶಕ್ತಿಯ ಮುಂದೆ “ನಾಕ” ವಿಲವಿಲ…!!!

ಧಾರವಾಡ: ಹೊಸದಾಗಿ ಆರಂಭಗೊಳ್ಳಲು ಹೋಮ ನಡೆಸುತ್ತಿದ್ದ ಲೋಟಸ್ ಲಿಕ್ಕರ್ಸ್ ಬಂದ್ ಮಾಡುವಂತೆ ರಾತ್ರೋರಾತ್ರಿ ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಹೆಗ್ಗೇರಿಯಲ್ಲಿ ಸಂಭವಿಸಿದೆ.
ನೂತನವಾಗಿ ನಾರಾಯಣ ಕಲಾಲ ಎಂಬ ವ್ಯಾಪಾರಿ ಲೋಟಸ್ ಲಿಕ್ಕರ್ ಹೆಸರಿನಲ್ಲಿ ಮದ್ಯದ ಅಂಗಡಿ ಆರಂಭಿಸಲು ಪೂಜೆಯ ಹೋಮ ನಡೆಸುತ್ತಿದ್ದಾಗಲೇ, ರೊಚ್ಚಿಗೆದ್ದ ಮಹಿಳೆಯರು ಯಾವುದೇ ಕಾರಣಕ್ಕೂ ಆರಂಭಿಸಬೇಡಿ ಎಂದರು.
ಮಹಿಳೆಯರನ್ನ ಸಮಾಧಾನ ಮಾಡಲು ನಾರಾಯಣ ಕಲಾಲ ಸಾಕಷ್ಟು ಪ್ರಯತ್ನ ಮಾಡುತ್ತಿರುವುದು ಕಂಡು ಬಂದಿತು. ಆದರೆ, ಯಾವುದೇ ಮಾತಿಗೂ ಸೊಪ್ಪು ಹಾಕದೇ ಮಹಿಳೆಯರು ಹೋರಾಟ ನಡೆಸುತ್ತಿದ್ದಾರೆ.