ಧಾರವಾಡದಲ್ಲಿ ಮಹಿಳಾ ಮಣಿಗಳ “ಕ್ರಾಂತಿ”- ಮೆತ್ತಗಾದ ನಾರಾಯಣ ಕಲಾಲ, ಬಾರ್ ಸ್ಥಳಾಂತರಕ್ಕೆ ಒಪ್ಪಿಗೆ…

ಧಾರವಾಡ: ತಮ್ಮ ಕುಟುಂಬ ಉತ್ತಮವಾಗಿರಲಿ ಎಂಬ ಉದ್ದೇಶದಿಂದ ಊರಿಗಂಡಿಗೊಂಡು ಆರಂಭವಾಗುತ್ತಿದ್ದ ಬಾರ್‌ವೊಂದನ್ನ ಬಂದ್ ಮಾಡಿಸುವಲ್ಲಿ ಮಹಿಳೆಯರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಹೆದ್ದಾರಿಯ ಪಕ್ಕದಲ್ಲಿ ನಾರಾಯಣ ಕಲಾಲ ಮಾಲೀಕತ್ವದಲ್ಲಿ ಆರಂಭವಾಗಬೇಕಿದ್ದ ಬಾರ್, ನಾರಿಮಣಿಗಳಿಂದ ಸ್ಥಳಾಂತರವಾಗುವ ಸ್ಥಿತಿ ನಿರ್ಮಾಣವಾಗಿದೆ.
ವೀಡಿಯೋ…
ಹೆಗ್ಗೇರಿ ಭಾಗದಲ್ಲಿ ಬಡವರಿಗೆ ಅನುಕೂಲವಾಗಲಿ ಎಂದು ಹಂಗರಕಿ ದೇಸಾಯಿ ಕುಟುಂಬದವರು ಜಾಗವನ್ನ ನೀಡಿದ್ದರು. ಪಡೆದವರ ಪೈಕಿ ಓರ್ವರು ಬಾರ್‌ಗೆ ಲೀಸ್ ಕೊಟ್ಟಿದ್ದರಿಂದ ಲೋಟಸ್ ಲಿಕ್ಕರ್ಸ್ ಆರಂಭವಾಗಲು ಹೋಮ ಮಾಡಲಾಗಿತ್ತು. ಆದರೆ, ಎಲ್ಲವೂ ಈಗ ಹೋಮ ಮಾಡಿದಂತಾಗಿದೆ.