21 ಲಕ್ಷ ರೂ. ಟೊಮ್ಯಾಟೋ ತುಂಬಿದ್ದ ಲಾರಿ ಸಮೇತ ಚಾಲಕ, ಕ್ಲೀನರ್ ಎಸ್ಕೇಪ್…!!!

21 ಲಕ್ಷ ರೂಪಾಯಿಯ ಟೊಮ್ಯಾಟೊ ತುಂಬಿದ್ದ ಲಾರಿ ಸಮೇತ ಪರಾರಿ
ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಮಂಡಿ ಮಾಲೀಕರು
ಕೋಲಾರ: ರಾಜಸ್ಥಾನಕ್ಕೆ ಕೋಲಾರ ಮಾರುಕಟ್ಟೆಯಿಂದ ಹೊರಟಿದ್ದ ಟೊಮ್ಯಾಟೊ ತುಂಬಿದ ಲಾರಿಯೊಂದು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೋಲಾರ ಮಾರುಕಟ್ಟೆಯಿಂದ ರಾಜಸ್ಥಾನದ ಜೈಪುರ್‌ಗೆ ಜುಲೈ-27 ರಂದು ಹೊರಟಿದ್ದ ಲಾರಿಯಲ್ಲಿ ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೊ ತುಂಬಿತ್ತು.
ಕೋಲಾರದ ಮೆಹತ್ ಟ್ರಾನ್ಸ್ ಪೋರ್ಟ್ ಗೆ ಸೇರಿದ ಲಾರಿ, ಡ್ರೈವರ್, ಕ್ಲೀನರ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಕೋಲಾರ ನಗರ ಠಾಣೆಗೆ ಈ ಬಗ್ಗೆ ಮಂಡಿ ಮಾಲೀಕರಿಂದ ದೂರನ್ನ ನೀಡಿದ್ದಾರೆ.
ಎ.ಜಿ.ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರಿಗೆ ಸೇರಿದ ಟೊಮ್ಯಾಟೊ,
ಮೆಹತ್ ಟ್ರಾನ್ಸ್ ಪೋರ್ಟ್ ಮಾಲೀಕ ಸಾಧಿಕ್ ಸಂಪರ್ಕಕ್ಕೂ ಸಿಗದ ಹಿನ್ನಲೆ. ಕೋಲಾರ ನಗರ ಪೊಲೀಸ್ ಠಾಣೆಗೆ ದೂರನ್ನ ನೀಡಲಾಗಿದೆ.