ಉಫ್… ಯಪ್ಪಾ.. ಸ್ವಲ್ಪದ್ರಲ್ಲೇ ಪಾರಾದ್ರೂ.. ಪೊಲೀಸ್ರೇ ಇದನ್ನೋಮ್ಮೆ ಕಣ್ಣರಳಿಸಿ ನೋಡಿ..!
1 min readಹುಬ್ಬಳ್ಳಿ: ವಾಣಿಜ್ಯನಗರದಲ್ಲಿ ವಾಣಿಜ್ಯ ಪರಿಕರಗಳನ್ನ ಸಾಗಾಟ ಮಾಡುವ ವಾಹನಗಳಿಗೆ ಯಾವುದೇ ರೀತಿಯ ಕಡಿವಾಣ ಹಾಕದೇ ಇರುವುದು, ಹಲವು ಆತಂಕಕ್ಕೆ ಕಾರಣವಾಗುತ್ತಿತ್ತು. ವಾಹನ ಚಾಲಕನ ಯಡವಟ್ಟಿನಿಂದ ಸ್ಟೇನ್ ಲೆಸ್ ತಗಡುಗಳು ಬಿದ್ದು, ಆತಂಕ ಮೂಡಿಸಿದ ಘಟನೆ ನಡೆಯಿತು.
ಹುಬ್ಬಳ್ಳಿಯ ತಾಡಪತ್ರಿಗಲ್ಲಿಯಲ್ಲಿ ತಗಡು ಹಾಗೂ ಕಬ್ಬಿಣದ ರಾಡಗಳನ್ನ ಹೇರಿಕೊಂಡು ಹೋಗುತ್ತಿದ್ದ ಸಮಯದಲ್ಲಿ ಲಾರಿಯಲ್ಲಿದ್ದ ವಸ್ತುಗಳು ಕೆಳಗೆ ಜಾರಿಬಿದ್ದವು. ಇದೇ ಸಮಯದಲ್ಲಿ ಹಿಂದೆ ಬರುತ್ತಿದ್ದ ಬೈಕ್ ಸವಾರರು, ತಕ್ಷಣವೇ ಜಾಗೃತರಾಗಿ ಸೈಡ್ ತೆಗೆದುಕೊಂಡ ಪರಿಣಾಮ ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ.
ಸಂಚಾರಿ ಠಾಣೆ ಪೊಲೀಸರನ್ನ ಕಣ್ಣು ತಪ್ಪಿಸಿ, ಲಾರಿಗಳು ಸಂಚಾರ ಮಾಡುತ್ತಿರುವುದೇ ಇಂತಹ ಅವಘಡಕ್ಕೆ ಕಾರಣವಾಗುತ್ತಿವೆ. ಸಂಚಾರಿ ಠಾಣೆಯ ಪೊಲೀಸರು ಕಠಿಣ ಕ್ರಮಗಳನ್ನ ತೆಗೆದುಕೊಂಡರೇ, ಇಂತಹ ತೊಂದರೆಗಳನ್ನ ದೂರ ಮಾಡಬಹುದು.
ಈಗಲಾದರೂ, ವಾಣಿಜ್ಯ ಪರಿಕರಗಳನ್ನ ಸಾಗಾಟ ಮಾಡುವ ಲಾರಿಗಳ ಬಗ್ಗೆ ಜಾಗೃತೆ ವಹಿಸುತ್ತಾರೋ ಎಂಬುದನ್ನ ಕಾದು ನೋಡಬೇಕಿದೆ.