ಧಾರವಾಡದ ಬಳಿ ಹೊತ್ತಿ ಉರಿಯುತ್ತಿದೆ ‘ಜಾಲ’ ಲಾರಿ….!
ಧಾರವಾಡ: ಬೆಳಗಾವಿಯಿಂದ ಬೆಂಗಳೂರಿಗೆ ಹೊರಟಿದ್ದ ಲಾರಿಯೊಂದಕ್ಕೆ ಬೆಂಕಿ ಹೊತ್ತಿ ಧಗಧಗ ಉರಿಯುತ್ತಿರುವ ಘಟನೆ ಧಾರವಾಡ ಸಮೀಪದ ಮನಸೂರ ಕ್ರಾಸ್ ಬಳಿಯಲ್ಲಿ ನಡೆಯಿತ್ತಿದೆ.
ಜಾಲ್ ಕಂಪನಿಯ ಮಿಕ್ಸರ್ ಹಾಗೂ ಇನ್ನುಳಿದ ಪರಿಕರಗಳನ್ನ ತೆಗೆದುಕೊಂಡು ಹೋಗುತ್ತಿದ್ದ ಲಾರಿಗೆ ಸಡನ್ನಾಗಿ ಬೆಂಕಿ ತಗುಲಿದೆ. ಇದರಿಂದ ಬೈಪಾಸ್ ಸಂಪೂರ್ಣ ನಿಷಿದ್ಧವಾಗಿದ್ದು, ದೂರ ದೂರದಲ್ಲೇ ವಾಹನಗಳನ್ನ ತಡೆದು ನಿಲ್ಲಿಸಲಾಗಿದೆ.
ಬೆಂಕಿಯ ಕೆನ್ನಾಲಿಗೆ ಇಡೀ ಲಾರಿಯನ್ನ ಆವರಿಸಿದ್ದು, ಆತಂಕ ಸೃಷ್ಟಿ ಮಾಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸುತ್ತಿದ್ದು, ಪರಿಸ್ಥಿತಿ ಹತೋಟಿ ಮೀರಿದೆ.
ಧಾರವಾಡದ ಸಂಚಾರಿ ಠಾಣೆಯ ಪೊಲೀಸರು, ಘಟನಾ ಸ್ಥಳಕ್ಕೆ ತೆರಳಿದ್ದು, ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಘಟನೆಯಿಂದ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ, ಬೈಪಾಸ್ ಬಂದಾಗಿದೆ.