Exclusive- ಹುಬ್ಬಳ್ಳಿಯಿಂದ ಹೊರಟಿದ್ದ ಲಾರಿ: ಎರಡಿಂಚಲ್ಲಿ ಉಳಿದಿದ್ದು ಹೇಗೆ: ಒಳಗಿದ್ದವರೂ ಹೇಗೆ ಪಾರಾದ್ರೂ..!
ಹುಬ್ಬಳ್ಳಿ: ಸರಕು ಸಾಮಾನುಗಳನ್ನ ಹೊತ್ತು ವಿಜಯಪುರದತ್ತ ಹೊರಟಿದ್ದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬದ ಸಮೇತ ಬಿದ್ದು, ಎರಡೇ ಎರಡು ಇಂಚಿನಲ್ಲಿ ವಿದ್ಯುತ್ ತಂತಿಯಿಂದ ದೂರವುಳಿದು ಬಹುದೊಡ್ಡಅನಾಹುತ ತಪ್ಪಿದ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಸೊಲ್ಲಾಪುರದತ್ತ ಹೊರಟಿದ್ದ ಲಾರಿಯು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದರಲ್ಲಿದ್ದ ನಿಸಾರ ಮತ್ತು ಮಲ್ಲಪ್ಪ ಎಂಬುವವರು ಜಿಗಿದು ಪಾರಾಗಿದ್ದಾರೆ. ಸೋಜಿಗವೆನ್ನಿಸುವ ಘಟನೆ ಏನೆಂದರೇ, ಸ್ವಲ್ಪೇ ಸ್ವಲ್ಪ ಅಂತರದಲ್ಲಿ ಕಂಬ ಬಿದ್ದರೂ ತಂತಿ ತಾಗದೇ ಇರುವುದರಿಂದ ಲಾರಿಗೆ ಬೆಂಕಿ ತಗುಲಿಲ್ಲ.
ಈ ಎಕ್ಸಕ್ಲೂಸಿವ್ ದೃಶ್ಯಾವಳಿಗಳು ಇಲ್ಲಿವೆ ನೋಡಿ..