Posts Slider

Karnataka Voice

Latest Kannada News

ಧಾರವಾಡದ RFO ಮಹೇಶ ಹಿರೇಮಠ ಮನೆ ಮೇಲೆ ಲೋಕಾಯುಕ್ತ ದಾಳಿ….

1 min read
Spread the love

ಧಾರವಾಡ: ಅರಣ್ಯ ಇಲಾಖೆಯ ವಿಭಾಗೀಯ ಅರಣ್ಯ ಅಧಿಕಾರಿಯ ಮನೆ ಮೇಲೆ ಲೋಕಾಯುಕ್ತರು ಇಂದು ಬೆಳ್ಳಂಬೆಳಿಗ್ಗೆ ದಾಳಿ ಮಾಡಿದ್ದು, ಮಹತ್ವದ ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ.

ಧಾರವಾಡದ ಕುಮಾರೇಶ್ವರ ಬಡಾವಣೆಯ ಮೂಕಾಂಬಿಕಾ ನಗರದಲ್ಲಿನ ನಿವಾಸಿ ಆರ್‌ಎಫ್ಓ ಮಹೇಶ ಹಿರೇಮಠ ಅವರ ಮನೆ ಮತ್ತು ಕಚೇರಿಯಲ್ಲಿ ಲೋಕಾಯುಕ್ತರು ಪರಿಶೀಲನೆ ಆರಂಭಿಸಿದ್ದಾರೆ.

ಲೋಕಾಯುಕ್ತ ಎಸ್ಪಿ ಶಂಕರ ರಾಗಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆಗಳನ್ನು ಕ್ರೋಡಿಕರಿಸಲಾಗುತ್ತಿದೆ ಎಂದು ತಿಳಿದು ಬಂದಿದ್ದು, ದಾಳಿ ಮುಂದುವರೆದಿದೆ.


Spread the love

Leave a Reply

Your email address will not be published. Required fields are marked *

You may have missed