ಕರ್ನಾಟಕ ಪಬ್ಲಿಕ್ ಶಾಲೆಯ ಹೆಡ್‌ಮಾಸ್ಟರ್ ಬಂಧನ- ಲಂಚ ಪಡೆಯುತ್ತಿದ್ದಾಗಲೇ ಟ್ರ್ಯಾಪ್….

ಅಡ್ಮಿಶನ್ ಮಾಡಿಕೊಳ್ಳಲು ಲಂಚ ಸ್ವೀಕಾರ, ಸವಣೂರು ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕನ ಬಂಧನ
ಹಾವೇರಿ: ಸವಣೂರು ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಕಲ್ಲಪ್ಪ ಕಾಟೇನಹಳ್ಳಿ ಎಂಬುವವರನ್ನ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬಂಧಿಸಿದ ಘಟನೆ ಸಂಭವಿಸಿದೆ.
ಸವಣೂರು ಖಾದರಭಾಗ ಓಣಿಯ ಅಕ್ಬರ ಅಬ್ದುಲಹಮೀದ ಕಂದಿಲವಾಲೆ ದೂರಿನ ಆಧಾರದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ತಮ್ಮ ಎರಡನೇ ಮಗನ ಅಡ್ಮಿಶನ್ ಮಾಡಿಸಲು ಮುಖ್ಯೋಪಾದ್ಯಾಯರ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿಯವರನ್ನ ಅಕ್ಬರ್ ಭೇಟಿಯಾಗಿದ್ದರು.
ಅಡ್ಮಿಶನ್ ಮಾಡಿಕೊಳ್ಳಲು ರೂ 50.ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟು, 10 ಸಾವಿರ ರೂಪಾಯಿ ಲಂಚವನ್ನ ಸವಣೂರು ನಗರದ ಹಾವಣಗಿ ಪ್ಲಾಟ್‌ನಲ್ಲಿರುವ ಶಿಕ್ಷಕನ ಮನೆಯಲ್ಲಿ ಪಡೆಯುತ್ತಿದ್ದಾಗ ಲೋಕಾಯುಕ್ತರು ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳಾದ ಎಂ. ಎಸ್. ಕೌಲಾಪುರೆ, ಮಧುಸೂದನ ಸಿ, ಮಂಜುನಾಥ ಪಂಡಿತ್, ಬಸವರಾಜ ಹಳಬಣ್ಣನವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಆರೋಪಿತ ಮುಖ್ಯೋಪಾದ್ಯಾಯ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿಯವರನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.