ಜೂನ್ 30ರ ವರೆಗೆ ಲಾಕ್ ಡೌನ್ ವಿಸ್ತರಣೆಗೆ ಕೇಂದ್ರ ಸೂಚನೆ…!

ನವದೆಹಲಿ: ಕೊರೋನಾ ಪ್ರಕರಣಗಳು ಇನ್ನೂ ಹತೋಟಿಗೆ ಬರದ ಹಿನ್ನೆಲೆಯಲ್ಲಿ ಲಾಕ್ ಡೌನ್ ನ್ನೂ ಜೂನ್ 30 ರವರೆಗೆ ಮುಂದುವರೆಸುವಂತೆ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ.

ಈ ಬಗ್ಗೆ ರಾಜ್ಯ ಸರಕಾರಗಳಿಗೆ ಪತ್ರ ಬರೆದಿರುವ ಕೇಂದ್ರ ಸರಕಾರ ಸೂಚನೆಯನ್ನ ಪಾಲಿಸುವಂತೆ ಹೇಳಿದೆ. ಕೊರೋನಾ ಪ್ರಕರಣಗಳನ್ನ ಹತೋಟಿಗೆ ತರಲು ಲಾಕ್ ಡೌನ್ ಅವಶ್ಯಕತೆ ಕಂಡು ಬಂದಿದೆ ಎಂಬುದನ್ನ ತಿಳಿಸಲಾಗಿದೆ.
ಈಗಾಗಲೇ ಜೂನ್ 7ರ ವರೆಗೆ ಲಾಕ್ ಡೌನ್ ವಿಧಿಸಿ ಆದೇಶ ನೀಡಲಾಗಿತ್ತು. ಈಗ ಮತ್ತೆ ಜೂನ್ 30ರ ವರೆಗೆ ಲಾಕ್ ಡೌನ್ ಮಾಡಬೇಕೆಂದು ಹೇಳಿದ್ದರಿಂದ, ಮುಂದಿನ ಕ್ರಮದ ಬಗ್ಗೆ ರಾಜ್ಯ ಸರಕಾರ ಮತ್ತಷ್ಟು ಸ್ಪಷ್ಟಣೆಯನ್ನ ಕೊಡಬೇಕಿದೆ.