Posts Slider

Karnataka Voice

Latest Kannada News

ದಾವಣಗೆರೆ ಲಾಕ್ ಡೌನ್ ಕಟ್ಟುನಿಟ್ಟು- ಆರ್ಥಿಕ ಚಟುವಟಿಕೆಗೆ ಮತ್ತಷ್ಟು ಅವಕಾಶ

Spread the love

ದಾವಣಗೆರೆ: ನಗರದಲ್ಲಿ ಇಂದಿನಿಂದ ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಆರ್ಥಿಕ ಚಟುವಟಿಕೆಗೆ ಅವಕಾಶ. ಹಿಂದೆ ಇದ್ದ ಬೆಳಿಗ್ಗೆ 7ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗಿನ ಆದೇಶ ವಾಪಸ್ ಪಡೆಯಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮ ಪಾಲನೆಯೊಂದಿಗೆ  ವಹಿವಾಟು ನಡೆಸಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

ಸಾಮಾಜಿಕ ಅಂತರ ಕಾಪಾಡದೇ ವಹಿವಾಟು ನಡೆಸಿದ್ದು ಕಂಡು ಬಂದಲ್ಲಿ ಅಂತಹ ಅಂಗಡಿ ಸೀಲ್ ಮಾಡಲಾಗುವುದು. ಬಟ್ಟೆ, ದಿನಸಿ, ಕೈಗಾರಿಕೆ ಸೇರಿದಂತೆ ಬಹುತೇಕ ಆರ್ಥಿಕ ವಹಿವಾಟು ನಡೆಸಬಹುದು. ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಆಟೋ ಬಸ್ ಸಂಚಾರ ಇರಲ್ಲ. ಕಂಟೈನ್ ಮೆಂಟ್ ಜೋನ್ ಗಳ‌ ಸುತ್ತ ಒಂದು ನೂರು ಮೀಟರ್ ಪ್ರದೇಶ ಹೊರತು ಪಡಿಸಿ ವಹಿವಾಟು ನಡೆಸತಕ್ಕದ್ದು ಎಂದು ಡಿಸಿ ಮಹಾಂತೇಶ ಬೀಳಗಿ ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *