ಲಾಕ್ ಡೌನ್ ಪ್ರಭಾವ: ಜನಸಂಖ್ಯೆ ಹೆಚ್ಚಳದ ಭೀತಿ: ವಿಶ್ವಸಂಸ್ಥೆಯ ಆತಂಕ

ಜಿನೀವಾ: ಕೊವೀಡ್-19ನಿಂದ ಜಗತ್ತಿನಾಧ್ಯಂತ ಮರಣಮೃದಂಗ ಮುಂದುವರೆಯುತ್ತಿರುವ ಬೆನ್ನಲ್ಲೇ ಲಾಕ್ ಡೌನ್ ನಿಂದಾಗಿ ಜನಸಂಖ್ಯೆಯಲ್ಲಿ ಬಾರೀ ಹೆಚ್ಚಳವಾಗಲಿದ್ದು, 70ಲಕ್ಷ ಮಹಿಳೆಯರು ಗರ್ಭೀಣಿಯರಾಗಲಿದ್ದಾರೆಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಮುಂದಿನ ಕೆಲವು ತಿಂಗಳುಗಳಲ್ಲಿ ಕನಿಷ್ಠ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳ 70ಲಕ್ಷ ಸ್ತ್ರೀಯರು ಗರ್ಭೀಣಿಯರಾಗಲಿದ್ದಾರೆ. ಇದಕ್ಕೆ ಕೊರೋನಾ ಲಾಕ್ ಡೌನ್ ಕಾರಣವೆಂದು ವಿಶ್ವಸಂಸ್ಥೆ ತಿಳಿಸಿದೆ.
ಗರ್ಭನಿರೋಧಕ ಔಷಧಗಳ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಸಕಾಲಕ್ಕೆ ಜನರಿಗೆ ಔಷಧ ಲಭಿಸದೇ ಇರುವ ಕಾರಣದಿಂದ ಮಹಿಳೆಯರು ಅನಪೇಕ್ಷಿತವಾಗಿ ಗರ್ಭವತಿಯಾಗಲಿದ್ದಾರೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯು ದತ್ತಾಂಶ ಬಿಡುಗಡೆ ಮಾಡಿದೆ.