ರಾಜ್ಯದ ಪ್ರತಿಯೊಬ್ಬ “ಲಿಂಗಾಯತರು” ನೋಡಲೇಬೇಕಾದ ಸ್ಟೋರಿಯಿದು….!!!!

ಧಾರವಾಡ: ರಾಜ್ಯದಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂಬ ಕೂಗು ದಿನೇ ದಿನೇ ಹೆಚ್ಚಾಗುತ್ತಲೆ ಇದೆ. ಆದರೆ, ಇಲ್ಲೊಬ್ಬ ಯುವಕ ಇಡೀ ವೀರಶೈವ ಲಿಂಗಾಯತ ಸಮುದಾಯವೇ ಹೆಮ್ಮೆ ಪಡುವಂತಹ ಕಾರ್ಯವನ್ನ ಸದ್ದಿಲ್ಲದೇ ಮಾಡುತ್ತ ಸಾಗಿದ್ದಾನೆ.
ಹೌದು… ಓರ್ವ ಯುವಕನಿಗೆ ತನ್ನ ಸಮುದಾಯದ ಮೇಲಿನ ಪ್ರೀತಿ ಎಷ್ಟು ಎಂಬುದಕ್ಕೆ ಆತನಲ್ಲಿನ ಮಾನವೀಯ ಗುಣಗಳು ಸಾಕ್ಷ್ಯ ನುಡಿಯುತ್ತಿವೆ. ಸಮಾಜದ ಬಯಕೆಯಂತೆ ಕಷ್ಟದಲ್ಲಿದ್ದವರ ಕಣ್ಣು ಒರೆಸುತ್ತ ಸಾಗಿದ್ದಾನೆ ಆ ಯುವಕ
ಯಾರೂ ಅಂತೀರಾ… ವೀಡಿಯೋ ಪೂರ್ಣ ನೋಡಿ…
ಭಾರತೀಯ ಜನತಾ ಪಕ್ಷದ ಕಟ್ಟಾಳು ಆಗಿರುವ ಮೂಲತಃ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಮಂಜುನಾಥ ಹೆಬಸೂರ, ಹುಬ್ಬಳ್ಳಿಯ ಈಶ್ವರನಗರದ ನಿವಾಸಿ. ಈತನಲ್ಲಿನ ಮಾನವೀಯ ಗುಣ ಸಮಾಜವೇ ಹೆಮ್ಮೆ ಪಡುವಂತಿದೆ.
ಸುಡಗಾಡಸಿದ್ಧರ ಕುಟುಂಬದ ಕುಡಿಗೆ ಕನ್ನಡಿಗ ಖ್ಯಾತ ಕ್ರಿಕೆಟರ್ ಕೆ.ಎಲ್.ರಾಹುಲ ಮೂಲಕ ಹಣಕಾಸಿನ ನೆರವನ್ನ ಕೊಡಿಸುವ ಮೂಲಕ ಮಂಜುನಾಥ ಹೆಬಸೂರ ಮತ್ತೊಮ್ಮೆ ಎಲ್ಲರ ಮನಗೆದ್ದಿದ್ದಾನೆ.